ಬಿಜೆಪಿ ಸರ್ಕಾರಕ್ಕೆ ಹೆಡ್‌ಲೈನ್‌ ಮೇಲೆಯೇ ಆಸಕ್ತಿ, ಡೆಡ್‌ಲೈನ್‌ ಮೇಲೆ ಅಲ್ಲ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಕೋವಿಡ್‌ ಲಸಿಕೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಡ್‌ಲೈನ್‌ಗಳ ಬಗ್ಗೆ ಆಸಕ್ತಿಯೇ ಹೊರತು, ಡೆಡ್‌ಲೈನ್‌ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಅವರು, ಎಲ್ಲ ಭಾರತೀಯರಿಗೂ ಉಚಿತವಾಗಿ ಲಸಿಕೆ ಸಿಗಬೇಕು. ಇದಕ್ಕಾಗಿ ಕೋವಿನ್‌ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಬಾರದು. ಏಕೆಂದರೆ, ಡಿಜಿಟಲ್‌ ಸೌಲಭ್ಯವಿಲ್ಲದವರೂ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದು ಪ್ರತಿಪಾದಿಸಿದರು. ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಪಾಡಬೇಕು, ಈ ವರ್ಷಾಂತ್ಯದ ವೇಳೆಗೆ ಸರ್ವರಿಗೂ … Read more

ಕೊಳಕು ಸೃಷ್ಟಿಸುವ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಡವೇ? ಎಂದ ಬ್ರಿಜೇಶ್ ಕಾಳಪ್ಪ

ಬೆಂಗಳೂರು : ಸೋನಿಯಾಗಾಂಧಿಯವರನ್ನು ನಿಂದಿಸುತ್ತಿರುವ ಕೊಳಕನ್ನು ಸೃಷ್ಟಿ ಮಾಡಿ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಕು ಬಾರಿಸಬೇಕು ಎನಿಸುವುದಿಲ್ಲವೇ ಎಂದು ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ಬ್ರಿಜೇಶ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೂಲ ಕಾರಣ ಏನೆಂದರೆ ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿ ಅವರ ಪೋಟೊ ಒಂದನ್ನು ಎಡಿಟ್ ಮಾಡಿ ಸುಳ್ಳು ಸುದ್ಧಿ ಹರಡಿಸಿದ ಬಿಜೆಪಿ ಐಟಿ ಸೆಲ್ ವಿರುದ್ಧ ಬ್ರಿಜೇಶ್ ಕಾಳಪ್ಪ ನವರು ಪೋಸ್ಟ್ ಒಂದು ಹಾಕಿದ್ದಾರೆ. ಆ ಪೋಸ್ಟ್ ಇಲ್ಲಿದೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರ … Read more

ಕೋಮು ಬಣ್ಣ ನೀಡಲು ಮುಂದಾಗಿದ್ದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್, 17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುವರಾ ಈಗ? ಬೆಡ್ ಬ್ಲಾಕಿಂಗ್ ಹಗರಣದ ರಾಜ್ಯ ಬಿಜೆಪಿ ಪಕ್ಷದ ‘ಮೆಡಿಕಲ್ ಭಯೋತ್ಪಾದನೆ’ ಸತೀಶ್ … Read more

ಬಿಜೆಪಿಯ ಸೊಕ್ಕಿನ ರಾಜಕಾರಣಕ್ಕೆ ಪಶ್ಚಿಮ ಬಂಗಾಳ ಜನತೆ ಮರೆಯಲಾರದ ಹೊಡೆತ ನೀಡಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ ಹೊಸ ಆಟ ಶುರುವಾಗಿದೆ. ದುಡ್ಡು,‌ ಕೋಮುವಾದ ಮತ್ತು ಅಧಿಕಾರದ ದುರುಪಯೋಗದ ಮೂಲಕ‌ ಚುನಾವಣೆಯನ್ನು ಗೆಲ್ಲಬಹುದೆಂಬ ಬಿಜೆಪಿಯ ಸೊಕ್ಕಿನ ರಾಜಕಾರಣಕ್ಕೆ ಪಶ್ಚಿಮ ಬಂಗಾಳದ ಜನತೆ ಮರೆಯಲಾರದ ಹೊಡೆತ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಸರಣಿ ಟ್ವೀಟ್ ಮಾಡಿದ ಅವರು, ಪಶ್ಚಿಮ ಬಂಗಾಳ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಟದಿಂದ‌ ಬಿಜೆಪಿ ಕೊರೊನಾ‌‌ ಸೋಂಕಿನ‌ ಅಪಾಯವನ್ನೂ ಧಿಕ್ಕರಿಸಿ, ಚುನಾವಣಾ ಆಯೋಗದ ಮೇಲೆ‌ ಒತ್ತಡ ಹೇರಿ ಅಲ್ಲಿ … Read more

ಸರಿಯಾಗಿ ಕೆಲಸ ಮಾಡಿದರೆ ಬಿಎಸ್ ವೈ ಮಸ್ಕಿಯಲ್ಲಿ ಠಿಕಾಣಿ ಹೂಡುವ ಅಗತ್ಯವಿತ್ತೆ? : ಡಿಕೆಶಿ ಪ್ರಶ್ನೆ

ಮಸ್ಕಿ ರಾಯಚೂರು): ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರು ಮಸ್ಕಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಸರಿಯಾಗಿ ಕೆಲಸ ಮಾಡಿದ್ದರೆ ಅದರ ಅಗತ್ಯವಿರುತಿತ್ತೇ? ಕೊರೊನಾ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಸಹಾಯ ಮಾಡಬಹುದಿತ್ತಲ್ಲವೇ? ಅವರು ಜನರನ್ನ ಹೇಗೆ ನಡೆಸಿಕೊಂಡರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ … Read more

ರಾಜ್ಯ ಬಿಜೆಪಿ ಸರ್ಕಾರ ಈಗ ‘ಹರಿದ ಬನಿಯನ್’ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ಬಿಜೆಪಿ – ಕಾಂಗ್ರೆಸ್ ನಡುವಿನ ಟ್ವಿಟ್ಟರ್ ಸಮರ ಇನ್ನೂ ಮುಂದುವರಿದಿದೆ. ಬಿಜೆಪಿಯ ಹಿರಿಯ ಸಚಿವರೊಬ್ಬರು ನಿನ್ನೆ ತಮ್ಮ ಸರ್ಕಾರದ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಕುರಿತು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್
“ಸಚಿವರೊಬ್ಬರು ತಮ್ಮದೇ ಮುಖ್ಯಮಂತ್ರಿ ವಿರುದ್ಧ ಸಂಪುಟ ಸಭೆಯಲ್ಲಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಇದರೊಂದಿಗೆ ಸರ್ಕಾರ ರಚಿಸಲು ಬಳಸಿದ ವಾಮಮಾರ್ಗಗಳ ಬಗೆಗಿನ ತನಿಖೆಗೆ ಕೋರ್ಟ್ ಆದೇಶಿಸಿದೆ. ಬಿಜೆಪಿ ನಿಮ್ಮ ಈ ಅಕ್ರಮ ಸರ್ಕಾರಕ್ಕೆ ಒಂದು ಕ್ಷಣವೂ ಮುಂದುವರೆಯುವ ನೈತಿಕತೆ ಇಲ್ಲ” ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿದೆ.

‘ರಾಜ್ಯ ಬಿಜೆಪಿ ಸರ್ಕಾರ ಈಗ “ಹರಿದ ಬನಿಯನ್” ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಬಿಜೆಪಿಗರ ಮಾತು ಕೇಳಿದಾಗಳೆಲ್ಲ ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿಯೇ ಮೊದಲು ಹುಟ್ಟಿದ್ದೋ? ಅನುಮಾನ ಮೂಡುತ್ತದೆ ಎಂದು ವ್ಯಂಗ್ಯ ಮಾಡಿದೆ.

ಎಳೆ ಕೂಸು ತೇಜಸ್ವಿ ಸೂರ್ಯ ಅವರೇ
ಶಾಸಕ ರವಿ ಸುಬ್ರಹ್ಮಣ್ಯ ನಿಮ್ಮ ಚಿಕ್ಕಪ್ಪ ಅಲ್ಲವೇ?!
ಕುಟುಂಬ ರಾಜಕಾರಣವೇ ಇಲ್ಲ ಎಂದು ರಾಜಾರೋಷವಾಗಿ ಸುಳ್ಳಾಡುವ ಬಿಜೆಪಿಗರೇ.
ನಿಮ್ಮವರ DNA ಪರೀಕ್ಷೆ ಮಾಡಿಸೋಣವೇ?
ಅನುಮಾನ ಬಗೆಹರಿದುಬಿಡಲಿ! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮ್ಮ ಮನೆಯ ಮಾಳಿಗೆಯೇ ಸೋರುತ್ತಿದೆ, ಕುಸಿದು ಬೀಳುವ ಹಂತದಲ್ಲಿದೆ ಪಕ್ಕದ ಮನೆಯ ಮಾಳಿಗೆಯನ್ನೇಕೆ ಹಿಣುಕುವಿರಿ!?

ಸುಧಾಕರ್ vs ರೇಣುಕಾಚಾರ್ಯ, ಆರ್ ಅಶೋಕ್ vs ಅಶ್ವಥ್ ನಾರಾಯಣ್, ಯಡಿಯೂರಪ್ಪ vs ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ತಲೆಮರೆಸಿಕೊಂಡ ಬೆನ್ನೆಲುಬಿಲ್ಲದ ಬಿಜೆಪಿಯವರಿಗೆ ಮೊದಲು ಕಿತ್ತಾಟ ನಿಭಾಯಿಸಲು ಹೇಳಿ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿಯನ್ನು ಆರೋಪಿಸಿದೆ.

ಸಿಡಿ’ ಪ್ರಕರಣದಲ್ಲಿ ರಾಜ್ಯ ಸರ್ಕಾರ ‘ಯುಪಿ ಮಾಡೆಲ್’ ಅನುಸರಿಸುತ್ತಿದೆ : ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಎಲ್ಲವೂ ಉಲ್ಟಾ! ಇಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಾರೆ, ದೂರುದಾರರು, ಸಂತ್ರಸ್ತರು ತನಿಖೆ ಎದುರಿಸುತ್ತಾರೆ! ಆರೋಪಿಗಳು ಭಯ ಹುಟ್ಟಿಸುತ್ತಾರೆ, ಆದರೂ ಅವರನ್ನೇ ರಕ್ಷಿಸಲಾಗುತ್ತದೆ. ಕಾನೂನಿನ ಮೇಲಿರುವ ಜನರ ಭರವಸೆಯನ್ನು ಈ ಸರ್ಕಾರ ಹುಸಿಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರದ ನಡೆಗಳನ್ನು ಖಂಡಿಸಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ. ‘ಇದೊಂದು ಸಿಡಿ ಪ್ರಕರಣದಲ್ಲಿ ಸರ್ಕಾರದ ಲಜ್ಜೆಗೇಡಿತನ, ಅಸಾಮರ್ಥ್ಯ, ಅತ್ಯಾಚಾರಿಗಳ ಪರವಾದ ಒಲವು, ಮಹಿಳಾ ವಿರೋಧಿ ನಿಲುವು ಎಲ್ಲವೂ … Read more

ಡೆಮಾಕ್ರೆಸಿಯ “ಡಿ” ಅರ್ಥ ಮೋದಿ ಸರ್ಕಾರಕ್ಕೆ ಗೊತ್ತಿಲ್ಲ | ಬೃಂದಾ ಕಾರಟ್ ಮಹತ್ವದ ವಿಚಾರ ಉಲ್ಲೇಖಿಸಿ ಪ್ರಶ್ನೆ

brinda karat

ನವದೆಹಲಿ(08-12-2020): ರೈತರ ಧ್ವನಿಯನ್ನು ಆಲಿಸದ ಕಾರಣ ಬಿಜೆಪಿ ಸರ್ಕಾರವನ್ನು ಟೀಕಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಾಯಕಿ ಬೃಂದಾ ಕಾರಟ್, ಮೋದಿ ಸರ್ಕಾರವು ಪ್ರಜಾಪ್ರಭುತ್ವದ ಡಿ ಅನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ದೇಶದ ರೈತರಿಗೆ ಸುಧಾರಣೆಗಳು ಬೇಡ ಎಂದು ಪ್ರತಿಪಾದಿಸಿದ ಕಾರಟ್, ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಯಾರು? ಎಂದು ಕೇಳಿದರು. ಪ್ರಜಾಪ್ರಭುತ್ವವು ಡಿ ಯಿಂದ ಪ್ರಾರಂಭವಾಗುತ್ತದೆ ಮತ್ತು ಮೋದಿ ಸರ್ಕಾರವು ಪ್ರಜಾಪ್ರಭುತ್ವದ ಡಿ ಅನ್ನು ಸಹ ಅರ್ಥಮಾಡಿಕೊಳ್ಳುವುದಿಲ್ಲ. ಈ ಸರ್ಕಾರವು ಪ್ರಜಾಪ್ರಭುತ್ವದ ಅರ್ಥವನ್ನು ಅರ್ಥಮಾಡಿಕೊಳ್ಳುವುದಿಲ್ಲ. … Read more