ಸರ್ಕಾರಿ ಮದರಸಾಗಳನ್ನು ರದ್ದುಪಡಿಸುವ ಬಿಲ್ ಪಾಸ್| ಖಾಸಗಿ ಮದರಸಾಗಳನ್ನು ನಿಯಂತ್ರಿಸಲು ಬರಲಿದೆ ಮತ್ತೊಂದು ಬಿಲ್!   

madarasa

ಗುವಾಹಟಿ ​(31-12-2020): ಅಸ್ಸಾಂ ವಿಧಾನಸಭೆಯಲ್ಲಿ ಸರ್ಕಾರಿ ಮದರಸಾಗಳನ್ನು ರದ್ದುಪಡಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಪ್ರತಿಪಕ್ಷದ ಶಾಸಕರ ಪ್ರತಿಭಟನೆಯ ಮಧ್ಯೆ, “ಸರಿಯಾದ ಚರ್ಚೆ” ಗಾಗಿ ಶಾಸನವನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂಬ ಬೇಡಿಕೆಯ ಹೊರತಾಗಿಯೂ ಮಸೂದೆ ಅಂಗೀಕಾರವಾಗಿದೆ. ಈಗ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ಮದರಸಾಗಳಿಗೆ ಸರ್ಕಾರದ ಹಣವನ್ನು ರದ್ದುಪಡಿಸಲಾಗುತ್ತದೆ ಮತ್ತು ಅವುಗಳನ್ನು 2021 ರ ಏಪ್ರಿಲ್ 1 ರೊಳಗೆ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುತ್ತದೆ. ಮಸೂದೆಯಡಿಯಲ್ಲಿ, ಅಸ್ಸಾಂನ ರಾಜ್ಯ ಮದರಸಾ ಶಿಕ್ಷಣ ಮಂಡಳಿಯನ್ನು ಸಹ ವಿಸರ್ಜಿಸಲಾಗುವುದು, ಆದರೆ ಇದು ಬೋಧನೆ ಮತ್ತು … Read more

3 ವಿವಾದಿತ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾದ ರಾಜ್ಯ ಸರಕಾರ!

ಬೆಂಗಳೂರು(01-10-2020): ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗದೆ ಬಾಕಿ ಉಳಿದಿರುವ ಮೂರು ವಿವಾದಿತ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ, ಕೈಗಾರಿಕಾ ವಿವಾದಗಳು ಮತ್ತು ಕಾನೂನುಗಳ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯಬಾರದು ಎಂದು ಸುಗ್ರೀವಾಜ್ಞೆ ಮೂಲಕ ಮಸೂದೆಗಳನ್ನು ಜಾರಿಗೆ ತರಲು ನಿರ್ಣಯಿಸಲಾಗಿದೆ ಎಂದು ಸರಕಾರದ ಉನ್ನತ … Read more

ಸುಪ್ರೀಂ ಕೋರ್ಟ್ ಅಂಗಳದಲ್ಲಿ ಕೃಷಿ ಮಸೂದೆ

suprem court

ನವದೆಹಲಿ(29-09-2020): ನೂತನ ಕೃಷಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೇರಳದ ತ್ರಿಶೂರ್ ಸಂಸದ ಟಿ.ಎನ್. ಪ್ರತಾಪನ್, ಕೃಷಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ನೂತನ ಕಾಯ್ದೆ 2020ರ ರೈತರ ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), 15 (ತಾರತಮ್ಯ ನಿಷೇಧ) ಮತ್ತು 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರಪತಿಗಳು ಸಹಿ … Read more