ಪ್ರತಿಭಟನೆಯ ವೇಳೆ ಬಂಧಿತ ತಾಯಿಯೊಂದಿಗೆ ಜೈಲಿನಲ್ಲಿದ್ದ ಬಾಲಕಿ ಸಾವು| ಪೊಲೀಸರ ವಿರುದ್ಧ ಕೊಲೆ ಆರೋಪ ಮಾಡಿದ ಕಾಂಗ್ರೆಸ್

KALBURGI

ಕಲಬುರಗಿ (04-01-2020): ತಾಯಿಯೊಂದಿಗೆ ಜೈಲಿಗೆ ಕಳುಹಿಸಲ್ಪಟ್ಟ ಮೂರು ವರ್ಷದ ಬಾಲಕಿ ಕರ್ನಾಟಕದ ಕಲಬುರಗಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಪೊಲೀಸರೆ ಬಾಲಕಿಯ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಬಾಲಕಿಯ ಸಾವಿನ ಬಗ್ಗೆ ಕಲಬುರಗಿಯ ಗುಲ್ಬರ್ಗಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್  ಹೊರಗೆ ನೂರಾರು ಜನರು ಜಮಾಯಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.  ಜೈಲಿನಲ್ಲಿ ಬಾಲಕಿಗೆ ಅನಾರೋಗ್ಯ ಮತ್ತು ಸ್ಥಿತಿ ಹದಗೆಟ್ಟ ನಂತರ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. … Read more

ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಮಗು ಸಾವು

infants

ಶಿವಮೊಗ್ಗ(13-12-2020): ಎರಡು ವರ್ಷದ ಮಗು ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು  ಬಳಿ ನಡೆದಿದೆ. ಈ ಹಿಂದೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಬಿಸಿ ಸಾಂಬಾರಿನ ಪಾತ್ರೆ ಮಗುಚಿ ಬಿದ್ದು ಪುಟ್ಟ ಮಗುವಿಗೆ ಗಂಭೀರವಾಗಿ ಗಾಯವಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಕಳೆದ 10ದಿನಗಳಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಮಗು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.      

ಇಂಡಿಗೊ ದೆಹಲಿ-ಬೆಂಗಳೂರು ವಿಮಾನದಲ್ಲಿ ಗಂಡು ಮಗು ಜನನ!

born baby

ಬೆಂಗಳೂರು(08-10-2020): ಇಂಡಿಗೋದ ದೆಹಲಿ-ಬೆಂಗಳೂರು ವಿಮಾನದೊಳಗೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂಡಿಗೊ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ದೆಹಲಿಯಿಂದ ಬೆಂಗಳೂರಿಗೆ 6 ಇ 122 ವಿಮಾನದಲ್ಲಿ ಗಂಡು ಮಗುವನ್ನು ಅಕಾಲಿಕವಾಗಿ ಹೆರಿಗೆ ಮಾಡಲಾಯಿತು ಎಂದು ನಾವು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೆಹಲಿ-ಬೆಂಗಳೂರು 6 ಇ 122 ವಿಮಾನದಲ್ಲಿ ಗಂಡು ಮಗು ಜನಿಸಿದೆ ಎಂದು ವಾಯುಯಾನ ಮೂಲಗಳು ತಿಳಿಸಿವೆ.  

ಮೆಜೆಸ್ಟಿಕ್​ನಿಂದ ಕಿಡ್ನಾಪ್ ಆಗಿದ್ದ ಬಾಲಕಿ ಸಿಕ್ಕಿದ್ದೇಗೆ ಗೊತ್ತಾ?

kidnap

ಬೆಂಗಳೂರು(02-10-2020): ಬೆಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ 2 ವರ್ಷದ ಬಾಲಕಿಯನ್ನು ತಮಿಳುನಾಡಿನಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸೆ.18ರಂದು ಬೆಂಗಳೂರಿನ ಮೆಜೆಸ್ಟಿಕ್​ನಿಂದ ಬಾಲಕಿ ಕಿಡ್ನಾಪ್ ಆಗಿದ್ದಳು. ಲೋಕಿತಾ ಎಂಬ ಬಾಲಕಿಯನ್ನು ಅಪಹರಿಸಲಾಗಿತ್ತು. ಆಕೆ ಕನ್ನಡ ಮಾತನಾಡಿದ್ದರಿಂದ ಸಂಶಯಗೊಂಡು ತಮಿಳುನಾಡು ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ  ಜಾನ್ ಜೋಸೆಫ್ ದಂಪತಿ ಕಿಡ್ನಾಪ್ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಿರುವುದು ತಿಳಿದು ಬಂದಿದೆ. ಲೋಕಿತಾ ನಾಪತ್ತೆ ಕುರಿತು ಮೊದಲು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತಮಿಳುನಾಡು ಪೊಲೀಸರು ಉಪ್ಪಾರ ಪೇಟೆ … Read more