ಅಯೋಧ್ಯೆ ಮಸೀದಿ ಧ್ವಂಸ ಪ್ರಕರಣ: 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ

babri mosq

ನವದೆಹಲಿ(13-01-2021): ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದರ  ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಆರೋಪಿಗಳಲ್ಲಿ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದ್ದಾರೆ. ಜನವರಿಯಲ್ಲಿ ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಮೂದ್ ಅಹ್ಮದ್ ಮತ್ತು ಸೈಯದ್ ಅಖ್ಲಾಕ್ ಅಹ್ಮದ್ ಅವರು ಖುಲಾಸೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್‌ನ ಲಕ್ನೋ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಕಳೆದ ವರ್ಷ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ … Read more

ಬಾಬರಿ ಮಸೀದಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ಮಂದಿರಕ್ಕೆ ಅಡ್ಡಿ| ಭೂಮಿಯೊಳಗೆ ಜಲ ಹರಿವು ಪತ್ತೆ!

ram mandir

ನವದೆಹಲಿ(02-01-2021): ಬಾಬರಿ ಮಸೀದಿ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದ್ದ ಮಂದಿರದ ಟ್ರಸ್ಟ್ ಗೆ ಆಘಾತ ಉಂಟಾಗಿದೆ. ಈಗಾಗಲೇ ನೂತನವಾಗಿ ರಚಿಸಿದ ಮಾದರಿಯಲ್ಲಿ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎನ್ನುವುದು ರಾಮಂದಿರ ಟ್ರಸ್ಟ್ ಮುಖ್ಯಸ್ಥ ನಿರ್ಮೇಂದ್ರ ಮಿಶ್ರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 2023ರಲ್ಲಿ ರಾಮಮಂದಿರ ಕಾರ್ಯ ಪೂರ್ತಿಗೊಳಿಸುವ ಉದ್ದೇಶವನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್ ಉದ್ದೇಶಿಸಿತ್ತು. ಕ್ಷೇತ್ರದ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದಾಗ ಭೂಮಿಯೊಳಗೆ ಜಲ ಹರಿವು ಕಂಡುಹಿಡಿದಿದ್ದಾರೆ. ಇದರಿಂದಾಗಿ ಈ ಮೊದಲಿನ ಮಾದರಿಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಸಾಧ್ಯವಿಲ್ಲ … Read more

ಅಯೋಧ್ಯೆ ಮಸೀದಿ ನಿರ್ಮಾಣ ಟ್ರಸ್ಟ್| ನಾಮನಿರ್ದೇಶನಕ್ಕೆ ಸುಪ್ರೀಂ ನಕಾರ

babri mosq

ನವದೆಹಲಿ(05-12-2020): ಅಯೋಧ್ಯೆ ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನಕ್ಕೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ವಕೀಲರಾದ ಶಿಶಿರ್ ಚತುರ್ವೇದಿ ಹಾಗೂ ಕೆಕೆ ಶುಕ್ಲಾ ಅವರು ಸಲ್ಲಿಸಿದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ. ಅರ್ಜಿದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಮಸೀದಿ ನಿರ್ಮಾಣದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಗೆ ಸೇರಿಸುವಂತೆ ಮನವಿ … Read more

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಜಡ್ಜ್ ಗೆ ಭದ್ರತೆ ಮುಂದುವರಿಸಬೇಕಂತೆ!

supremcourt

ನವದೆಹಲಿ(12-11-2020): ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ ಮಾಜಿ ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ಅವರ ಭದ್ರತೆಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಎಸ್ ಕೆ ಯಾದವ್ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಎಂ ಎಂ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಇತ್ತೀಚೆಗೆ ಖುಲಾಸೆಗೊಳಿಸಿದ್ದರು. ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಕೃಷ್ಣ,  ಪತ್ರವನ್ನು ಅವಲೋಕಿಸಿದ ನಂತರ, … Read more

ಬಾಬರಿ ಮಸೀದಿ ಧ್ವಂಸ ತೀರ್ಪಿನ ಬಗ್ಗೆ ಶಿರಾ ಚುನಾವಣಾ ಪ್ರಚಾರದಲ್ಲಿ ಕಳವಳ ವ್ಯಕ್ತಪಡಿಸಿದ ದೇವೇಗೌಡ!

devegowda

ಬೆಂಗಳೂರು(01-11-2020): ಬಾಬರಿ ಮಸೀದಿ ಧ್ವಂಸದ ಬಗ್ಗೆ ವಿಡಿಯೋ ಸಾಕ್ಷ್ಯಾಗಳು ಇದ್ದರೂ ಆರೋಪಿಗಳು ಖುಲಾಸೆಗೊಂಡರು ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದು, ತೀರ್ಪನ್ನು ಅವಾಸ್ತವ ಎಂದು ಹೇಳಿದ್ದಾರೆ. ಮುಸ್ಲಿಮರೇ ಹೆಚ್ಚಾಗಿರುವ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ದೇವೇಗೌಡ,1 ಲಕ್ಷಕ್ಕೂ ಅಧಿಕ ಜನರ ಮುಂದೆ ಮಸೀದಿಯನ್ನು ಕೆಡವಿದ್ದಾಗ, ಈ ಬಗ್ಗೆ ವಿಡಿಯೊ ಸಾಕ್ಷಿಗಳೇ ಇದ್ದಾಗಲೂ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇದು ದೇಶದ ಪರಿಸ್ಥಿತಿ ಎಂದು ಹೇಳಿದ್ದಾರೆ. ಘಟನೆಗೆ ದಿವಂಗತ ಮಾಜಿ ಪ್ರಧಾನಿ … Read more

ಬಾಬರಿ ಮಸೀದಿ ಧ್ವಂಸದ ಹಿಂದೆ ಪಿತೂರಿ ಇಲ್ಲ-ಏಕೆ ಇದನ್ನು ಕುರುಡರಿಂದ ಮಾತ್ರ ನಂಬಲು ಸಾಧ್ಯ?

babri

ನವದೆಹಲಿ(01-10-2020): ಬಾಬರಿ ಮಸೀದಿ ಧ್ವಂಸದ ಹಿಂದೆ ಯಾವುದೇ ಪಿತೂರಿ ಇರಲಿಲ್ಲ ಎಂದು ಉದ್ದೇಶಪೂರ್ವಕವಾಗಿ ಕುರುಡರು ಮಾತ್ರ ನಂಬುತ್ತಾರೆ. 1992 ರ ಡಿಸೆಂಬರ್ 6 ರ ಕರಾಳ ಭಾನುವಾರದಂದು ಅಯೋಧ್ಯೆಯಲ್ಲಿನ ಬೆಳವಣಿಗೆಗಳನ್ನು ನೋಡಿದವರು, ಕೇಂದ್ರೀಯ ತನಿಖಾ ದಳ, ವಿಶೇಷ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಇದು ಬರಹಗಾರ ಶರತ್ ಪ್ರಧಾನ್ ಅಭಿಪ್ರಾಯ. 16 ನೇ ಶತಮಾನದ ಬಾಬರಿ ಮಸೀದಿ ಧ್ವಂಸಕ್ಕಾಗಿ ಕ್ರಿಮಿನಲ್ ಪಿತೂರಿ ನಡೆಸಿದ 32 ಜನರಿಗೆ ನ್ಯಾಯಾಲಯವು ಕ್ಲೀನ್ ಚಿಟ್ ನಿನ್ನೆ ನೀಡಿದೆ. ಮಸೀದಿ ಧ್ವಂಸ … Read more

ಬಾಬರಿ ಮಸೀದಿ ಧ್ವಂಸ ಪ್ರಕರಣ; ಅಡ್ವಣಿ, ಜೋಶಿಗೆ ಕಠಿಣ ಶಿಕ್ಷೆ?

babri mosq

<strong>ನವದೆಹಲಿ(30-09-2020): </strong>ಬಾಬರಿ ಮಸೀದಿ ಧ್ವಂಸದ ಇಪ್ಪತ್ತೆಂಟು ವರ್ಷಗಳ ನಂತರ, ವಿಶೇಷ ನ್ಯಾಯಾಲಯವು ಇಂದು ಆರೋಪಿಗಳ ವಿರುದ್ಧ ತೀರ್ಪನ್ನು ನೀಡಲಿದೆ. ಬುಧವಾರ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ, ಉಮಾಭಾರತಿಯನ್ನು ಕೋರ್ಟ್ ಗೆ ಹಾಜರಿರುವಂತೆ ನ್ಯಾಯಾಲಯ ಈ ಮೊದಲು ಸೂಚಿಸಿತ್ತು. ಸೆಪ್ಟೆಂಬರ್ 16 ರಂದು, ತೀರ್ಪಿನ ವಿಚಾರಣೆಗಾಗಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯವು ನಿರ್ದೇಶಿಸಿತ್ತು. ಆರೋಪಿಗಳಲ್ಲಿ ಮಾಜಿ ಉಪ ಪ್ರಧಾನಿ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಜೋಶಿ ಮತ್ತು ಉಮಾ ಭಾರತಿ, … Read more