ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಲವ್ವರ್ ಜೊತೆ ಪರಾರಿಯಾದ ಡ್ರೈವರ್ ಅರೆಸ್ಟ್

atm driver

ಬೆಂಗಳೂರು (11-02-2021): ಎಟಿಎಂಗೆ ಹಣ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಲವ್ವರ್ ಜೊತೆ ಪರಾರಿಯಾಗಿದ್ದ ಚಾಲಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಯೋಗೇಶ್ ಬಂಧಿತ ಆರೋಪಿ. ಈತ ಫೆ. 3ರಂದು ಎಟಿಎಂಗೆ ಹಣ ತುಂಬಿಸಲು ಸೆಕ್ಯೂರಿಟಿಗಳು ಎಟಿಎಂಗೆ ತೆರಳಿದ್ದಾಗ ಹಣದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದ. ಸುಬ್ರಹ್ಮಣ್ಯ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಯೋಗೇಶ್ ಹಣ ಕದ್ದು ಗೆಳೆಯನ … Read more

ಬಿಗ್ ನ್ಯೂಸ್: ಎಟಿಎಂಗೆ ಹಣ ತುಂಬಿಸಲು ಬಂದ ಚಾಲಕ 65 ಲಕ್ಷ ರೂ.ಸಮೇತ ಪರಾರಿ

axis bank

ಬೆಂಗಳೂರು (03-02-2021): ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ 65 ಲಕ್ಷ ರೂ. ಸಮೇತ ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿ ನಡೆದಿದೆ. ಸುಬ್ರಹ್ಮಣ್ಯನಗರದಲ್ಲಿ ಆಕ್ಸಿಸ್ ಬ್ಯಾಂಕ್  ಎಟಿಎಂಗೆ ಹಣ ತುಂಬಲು ಅಧಿಕಾರಿಗಳು ಮತ್ತು ಗನ್ ಮ್ಯಾನ್ ಎಟಿಎಂ ಒಳಗೆ ಹೋಗಿದ್ದ. ಈ ವೇಳೆಯಲ್ಲಿ ವಾಹನದಲ್ಲಿದ್ದ ಚಾಲಕ 65 ಲಕ್ಷ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ತಕ್ಷಣವೇ ಅಧಿಕಾರಿಗಳು ಪೊಲೀಸರಿಗೆ ಈ ಕುರಿತು  ಮಾಹಿತಿ ನೀಡಿದ್ದು, ಡ್ರೈವರ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ.  

ಶಾಕಿಂಗ್ ಸುದ್ದಿ| ಎಟಿಎಂ ಬಳಕೆಗೂ ಬೀಳುತ್ತೆ ಶುಲ್ಕ!

atm

ನವದೆಹಲಿ(22-10-2020): ಎಟಿಎಂನಿಂದ 5 ಸಾವಿರ ರೂ.ಕ್ಕಿಂತ ಹೆಚ್ಚು ಹಣ ವಿತ್ ಡ್ರವಲ್ ಮಾಡಿದರೆ ಶುಲ್ಕ ವಿಧಿಸಲು ನಿಯಮವನ್ನು ಜಾರಿಗೆ ತರುವ ಸಾದ್ಯತೆಯಿದೆ ಎಂದು ವರದಿಯಾಗಿದೆ.  ಹೊಸ ಎಟಿಎಂ ನಿಯಮ ಜಾರಿಗೆ ಬಂದರೆ, ತಿಂಗಳಿಗೆ 5 ಬಾರಿ ಉಚಿತ ಎಟಿಎಂ ಸೇವೆ ನೀತಿ ರದ್ದಾಗಲಿದೆ. 5 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ. ಆರ್ ಬಿಐ ನೇಮಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಈ ಶುಲ್ಕ ವಿಧಿಸುವ ಪ್ರಕ್ರಿಯೆಗೆ … Read more

ಎಟಿಎಂ ಧ್ವಂಸಗೊಳಿಸಿ 11 ಲಕ್ಷ ಕಳ್ಳತನ

atm

ಬೆಂಗಳೂರು(02-10-2020): ಕೆಆರ್ ಪುರಂ ಬಳಿಯ ಭಟ್ಟರಹಳ್ಳಿಯಲ್ಲಿ ಎಟಿಎಂ ಯಂತ್ರವನ್ನು ಧ್ವಂಸ  ಮಾಡಿ 11 ಲಕ್ಷ ರೂ.ದೋಚಿರುವ ಘಟನೆ ನಡೆದಿದೆ . ಖಾಸಗಿ ಬ್ಯಾಂಕ್ ನ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿರುವ ಕಳ್ಳರು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ತಡರಾತ್ರಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.