ರಾಜ್ಯದ ಶಾಲೆಗಳು ಪುನರಾರಂಭ: ಮಾರ್ಗಸೂಚಿಗಳು ಹೀಗಿವೆ; ಓದಿ

ಕೊರೊನಾ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ರಿಂದ 12 ನೇ ತರಗತಿಯ ಒಳಗಿನ ತರಗತಿಗಳನ್ನು ಪುನಃ ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಗಸ್ಟ್‌ 23 ರಿಂದ ಭೌತಿಕ ತರಗತಿಗಳು ಪ್ರಾರಂಭವಾಗಲಿದ್ದು, ಮಾರ್ಗಸೂಚಿಗಳು ಬಿಡುಗಡೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರದಂದು ತಜ್ಞರೊಂದಿಗಿನ ಸಭೆಯಲ್ಲಿ ಶಾಲೆ ಪುನರಾರಂಭದ ನಿರ್ಧಾರವನ್ನು ತಿಳಿಸಿದ್ದರು. ಶಾಲಾ ಆವರಣಕ್ಕೆ ಪ್ರವೇಶಿಸುವ ಮೊದಲು, ಎಲ್ಲಾ ಪೋಷಕರು ಮತ್ತು ಶಾಲಾ ಸಿಬ್ಬಂದಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಹಾಕುವುದು ಕಡ್ಡಾಯ ಎಂದು … Read more

ಆಗಸ್ಟ್‌ 23 ರಿಂದ 9 ರಿಂದ 12 ನೇ ತರಗತಿಗಳು ಆರಂಭ: ಶಿಕ್ಷಣ ಸಚಿವ

ಆಗಸ್ಟ್‌ 23 ರಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿದೆ ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ಗುರುವಾರ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದಯಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದವು. ”ಆಗಸ್ಟ್‌ 23 ರಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿದೆ. ನಂತರದ ಪ್ರತಿಕ್ರಿಯೆಯನ್ನು ಆಧರಿಸಿ 1 ರಿಂದ 8 ನೇ ತರಗತಿಗಳನ್ನು ಸೆಪ್ಟಂಬರ್‌ನಿಂದ ಆರಂಭಿಸಲು ತೀರ್ಮಾನಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಗಳು ಇತ್ತೀಚೆಗೆ ಅಷ್ಟೇ … Read more