ಅಮಾನತುಗೊಂಡಿದ್ದ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಮತ್ತೆ ಚಾಲ್ತಿಗೆ

ಅತ್ಯಾಚಾರಕ್ಕೀಡಾಗಿದ್ದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬದ ಫೋಟೋಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಅಮಾನತುಗೊಂಡಿದ್ದ ರಾಹುಲ್ ಗಾಂಧಿಯ ಟ್ವಿಟರ್‌ ಖಾತೆ ಶನಿವಾರ ಮತ್ತೆ ಮರುಸ್ಥಾಪನೆಗೊಂಡಿದೆ ಎಂದು ಕಾಂಗ್ರೆಸ್‌ ಹೇಳಿದೆ. “ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಅನ್‌ಲಾಕ್ ಮಾಡಲಾಗಿದೆ” ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ. ರಾಹುಲ್‌ ಗಾಂಧಿಯ ಖಾತೆಯೊಂದಿಗೆ ಅಮಾನತುಗೊಂಡ ಇತರ ಕೆಲವು ನಾಯಕರ ಖಾತೆಗಳನ್ನು ಸಹ ಮರುಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಟ್ವಿಟರ್ ಕಾಂಗ್ರೆಸ್ ಪಕ್ಷ ಮತ್ತು ಅದರ ಹಲವು ನಾಯಕರ ಖಾತೆಗಳನ್ನು ಲಾಕ್ ಮಾಡಿದ ಒಂದು ದಿನದ … Read more

ನೆಹರೂ ಕುಟುಂಬದ ಕೊಡುಗೆಗೆ ಇಡೀ ಬಿಜೆಪಿಯೇ ಸಾಟಿಯಿಲ್ಲ: ಡಿ.ಕೆ. ಶಿವಕುಮಾರ್

‘ನೆಹರೂ ಕುಟುಂಬ ಈ ದೇಶಕ್ಕೆ ಮಾಡಿರುವ ತ್ಯಾಗ, ಸೇವೆ, ಅಭಿವೃದ್ಧಿಶೀಲವನ್ನಾಗಿ ಮಾಡಲು ನೀಡಿರುವ ಕೊಡುಗೆಗೆ ಇಡೀ ಬಿಜೆಪಿ ಪಕ್ಷವೇ ಸರಿಸಾಟಿಯಿಲ್ಲ. ಆದರೂ ಅವರ ಹೆಸರಿಗೆ ಮಸಿ ಬಳಿಯಲು ಸಿ.ಟಿ. ರವಿ ಅವರು ಆಡುತ್ತಿರುವ ಮಾತುಗಳು ಬಿಜೆಪಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘‘ಸಿ.ಟಿ. ರವಿ ಅವರು ಕೆಲ ದಿನಗಳ ಕಾಲ ಕನ್ನಡ ಮತ್ತು … Read more