ನವದೆಹಲಿ(31-10-2020): ಸ್ವನಿಧಿ ಯೋಜನೆಯಡಿ ಸಾಲ ಆಕಾಂಕ್ಷಿತ ಬೀದಿ ಬದಿ ವ್ಯಾಪಾರಸ್ಥರಿಗೆ ಶೀಘ್ರ ಸಾಲ ವಿತರಣೆಗೆ ಸಹಕಾರಿಯಾಗುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕ್ರಮವನ್ನು ಕೈಗೊಂಡಿದೆ.
ಸ್ವನಿಧಿ ಯೋಜನೆಯ ಪೋರ್ಟಲ್ ನ್ನು ಬ್ಯಾಂಕುಗಳ ಜೊತೆಗೆ ಸಂಯೋಜಿಸಲಾಗಿದೆ. ಇದಕ್ಕೆ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಎಸ್ಬಿಐ ಇ- ಮುದ್ರಾ ಪೋರ್ಟಲ್ ಜೊತೆಗೆ ಜೋಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಗಿದೆ.
ಬೀದಿ ಬದಿ ವ್ಯಾಪಾರಸ್ಥರಿಗೆ ಸ್ವನಿಧಿ ಯೋಜನೆಯಡಿ ತಲಾ 10 ಸಾವಿರ ರೂಪಾಯಿ ಸರಕಾರ ಸಾಲ ನೀಡಲಿದ್ದು 10 ಕಂತುಗಳಲ್ಲಿ ವ್ಯಾಪಾರಿಗಳು ಮರು ಪಾವತಿಸಬೇಕು. ಸಕಾಲದಲ್ಲಿ ಸಾಲ ಪಾವತಿಸಿದವರಿಗೆ ಬಡ್ಡಿಯಲ್ಲಿ ಶೇಕಡ 7 ರಷ್ಟು ಸಬ್ಸಿಡಿ ಸರಕಾರ ನೀಡುತ್ತದೆ.