ಬಾಲಕಿಗೆ ಕೋಣೆಯೊಳಗೆ ಹಾಕಿ ಧ್ಯಾನ ಮಾಡಿಸುತ್ತಿದ್ದ ಕಳ್ಳ ಸ್ವಾಮೀಜಿ: ಬಾಲಕಿ ಗರ್ಭಿಣಿ

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್(14-10-2020): ಬಾಲಕಿಯನ್ನು ಮಾನಸಿಕ ಅಸ್ವಸ್ಥತೆಯಿಂದ ಗುಣಪಡಿಸುವ ನೆಪದಲ್ಲಿ ಕರೆದು ನಿರಂತರ ಅತ್ಯಾಚಾರ ನಡೆಸಿದ ಸ್ವಾಮೀಜಿಯನ್ನು ಸ್ಥಳೀಯರು ಥಳಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಉತ್ತರಪ್ರದೇಶದ ಹತ್ರಾಸ್ ಮೂಲದ 20 ವರ್ಷದ ಯುವತಿಯ ಮೇಲೆ ನಡೆದ ಕ್ರೂರ ಚಿತ್ರಹಿಂಸೆ ಮತ್ತು ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೇ ಘಟನೆ ಹೊರಬಿದ್ದಿದೆ.

ಬಾಲಕಿಯನ್ನು ಪೋಷಕರು ಆ ವ್ಯಕ್ತಿಯ ಬಳಿಗೆ ಚಿಕಿತ್ಸೆಗೆಂದು ಕರೆದೊಯ್ದರು, ಸ್ವಾಮೀಜಿ ಮಾಂತ್ರಿಕ ಶಕ್ತಿಯನ್ನು ಹೊಂದಿದವನಂತೆ ನಟಿಸಿದ. ಬಾಲಕಿಗೆ ಕಾಯಿಲೆ ಗುಣಪಡಿಸುವುದಾಗಿ ಹೇಳಿಕೊಂಡು ಮೂರು ತಿಂಗಳಿನಿಂದ ಲೈಂಗಿಕ ಕಿರುಕುಳವನ್ನು ನೀಡಿದ್ದಾನೆ.

ಬಾಲಕಿಗೆ ಇತ್ತೀಚೆಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ನಂತರ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ, ಅವಳು ಗರ್ಭಿಣಿ ಎಂದು ತಿಳಿದುಬಂದಿದೆ.

ಪ್ರತ್ಯೇಕವಾದ ಕೋಣೆಯೊಳಗೆ ಧ್ಯಾನ ಮಾಡುವ ಹೆಸರಿನಲ್ಲಿ ಆ ವ್ಯಕ್ತಿ ಬಾಲಕಿಯನ್ನು ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿದ್ದಾನೆ.

ಘಟನೆ ತಿಳಿದ ಮಹಿಳಾ ಕಾರ್ಯಕರ್ತರು ಮತ್ತು ಸ್ಥಳೀಯರು ಅವರ ಮನೆಗೆ ತೆರಳಿ ಥಳಿಸಿದ್ದು, ಈ ವೇಳೆ ಸ್ವಾಮೀಜಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಜನ ಆತನ ಮೇಲೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು