ಬಿಹಾರ: ಮೋದಿ ಕೈ ತಪ್ಪಿತು ಉಪಮುಖ್ಯಮಂತ್ರಿ ಸ್ಥಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಪಾಟ್ನಾ(15/11/2020): ಕೊನೆ ಕ್ಷಣದಲ್ಲಿ ಉಪ‌ಮುಖ್ಯ ಮಂತ್ರಿ‌ಸ್ಥಾನವನ್ನು ಸುಶೀಲ್ ಕುಮಾರ್ ಮೋದಿ ಕಳೆದುಕೊಂಡಿದ್ದಾರೆ.

ಹೌದು. ಎರಡನೇ ಬಾರಿಗೆ ಸುಶೀಲ್ ಕುಮಾರ್ ಮೋದಿ ಅವರೇ ಉಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆಶ್ಚರ್ಯಕರ ಬೆಳವಣಿಗೆ ಅವರನ್ನು ಕೈಬಿಟ್ಟು, ಇತರ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ.

ಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ ಅವರು ಉಪಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬಗ್ಗೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿರುವ ಅವರು ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಕಾರ್ಯಕರ್ತ ಎಂಬ ಸ್ಥಾನವನ್ನು ನನ್ನಿಂದ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು