ಮುಂಬೈ(05-10-2020): ನಟ ಸುಶಾಂತ್ ಸಿಂಗ್ ರಜಪೂತರ ಸಾವು ಕೊಲೆಯೆಂಬ ಆರೋಪವನ್ನು ದೆಹಲಿ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್( AIIMS)ನ ತಜ್ಞರ ವರದಿಯು ಅಲ್ಲಗೆಳೆದ ಬೆನ್ನಿಗೆ ಏಮ್ಸ್ ತಂಡದ ಮುಖ್ಯಸ್ಥರ ನಿರ್ಣಾಯಕ ಧ್ವನಿಯೊಂದನ್ನು ರಾಷ್ಟ್ರೀಯ ಮಾಧ್ಯಮಗಳು ಬಿಡುಗಡೆ ಮಾಡಿದ್ದು,
ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ. ನಟನನ್ನು ಕತ್ತುಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಏಮ್ಸ್ ವೈದ್ಯರು ತನ್ನೊಂದಿಗೆ ಹೇಳಿರುವುದಾಗಿ ಸುಶಾಂತ್ ರ ತಂದೆ ಯ ನ್ಯಾಯವಾದಿ ವಿಕಾಸ್ ಸಿಂಗ್ ನೀಡಿದ ಹೇಳಿಕೆಗೆ ಈಗ ಸೋರಿಕೆಯಾಗಿರುವ ಧ್ವನಿಯು ಪುಷ್ಟಿ ನೀಡುತ್ತದೆ ಎನ್ನಲಾಗಿದೆ.