ಉನ್ನಾವೋ (07-10-2020): 18 ವರ್ಷದ ಯುವಕನ ಹೊಟ್ಟೆಯನ್ನು ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು 30 ಮೊಳೆಗಳು, ಹರಿತವಾದ ಕಬ್ಬಿಣದ ವಸ್ತುಗಳು, ನಾಲ್ಕಿಂಚಿನ ಕಬ್ಬಿಣದ ರಾಡ್, ಹಾಗೂ ಸ್ಕ್ರೂಡ್ರೈವರ್ಗಳನ್ನು ಹೊರತೆಗೆದಿರುವ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಭಟ್ವಾ ಗ್ರಾಮದ ಕರಣ್ ಎಂಬ 18 ವರ್ಷದ ಯುವಕನ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಕಬ್ಬಿಣದ ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದಾರೆ.
ಲಖನೌ-ಕಾನ್ಪುರ ಹೆದ್ದಾರಿಯಲ್ಲಿರುವ ಆಸ್ಪತ್ರೆಗೆ ಯುವಕನನ್ನು ಹೊಟ್ಟೆ ನೋವೆಂದು ಕರೆದುಕೊಂಡು ಬರಲಾಗಿತ್ತು ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಶಸ್ತ್ರಕ್ರಿಯೆ ನಡೆಸಿ ಎಲ್ಲವನ್ನೂ ತೆಗೆದಿದ್ದಾರೆ.
ಇನ್ನು ಯುವಕ ಮಾನಸಿಕ ಅಸ್ವಸ್ಥನಾಗಿದ್ದ. ಈ ಕಾರಣದಿಂದ ಆತ ಕಬ್ಬಿಣವನ್ನು ನುಂಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.