ವಾಕ್ ಸ್ವಾತಂತ್ರ್ಯಇತ್ತೀಚಿನ ದಿನಗಳಲ್ಲಿ ಹೆಚ್ಚು ದುರುಪಯೋಗವಾಗುತ್ತಿದೆ-ಸುಪ್ರೀಂ ಕೋರ್ಟ್

supremcourt
Share on facebook
Share on twitter
Share on linkedin
Share on whatsapp
Share on telegram
Share on email
Share on print

ದೆಹಲಿ(08-10-2020): ವಾಕ್ ಸ್ವಾತಂತ್ರ್ಯವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಾಕ್ ಸ್ವಾತಂತ್ರ್ಯ ಇತ್ತೀಚಿನ ದಿನಗಳಲ್ಲಿ ಅತ್ಯಂತ ದುರುಪಯೋಗಪಡಿಸಿಕೊಂಡ ಸ್ವಾತಂತ್ರ್ಯಗಳಲ್ಲಿ ಒಂದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರು ಮರ್ಕಾಜ್ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಸಭೆ ಕುರಿತು ಮಾದ್ಯಮಗಳು ದ್ವೇಷವನ್ನು ಹರಡಿದ್ದಕ್ಕಾಗಿ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್ ನಲ್ಲಿ  ದೆಹಲಿಯಲ್ಲಿ  ನಡೆದ ತಬ್ಲೀಘಿ ಸಭೆ ದೊಡ್ಡ ವಿವಾದವನ್ನು ಹುಟ್ಟುಹಾಕಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಉದ್ದೇಶಪೂರ್ವಕವಾಗಿ ಕೊರೊನಾ ಹರಡಲು ಸೇರಿದ್ದಾರೆ ಎಂಬಂತಹ ರೀತಿಯಲ್ಲಿ ಮಾದ್ಯಮಗಳು ಸುದ್ದಿ ಹರಡಿದ್ದವು. ತಬ್ಲಿಘಿಗಳನ್ನು ಮತ್ತು ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಮಾದ್ಯಮಗಳು ಸುಳ್ಳು ಮತ್ತು ದೋಷಪೂರಿತ ಸುದ್ದಿಗಳನ್ನು ಬಿತ್ತರಿಸಿದ್ದವು.

ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಮಾಧ್ಯಮಗಳನ್ನು ಸಮರ್ಥಿಸಿಕೊಂಡಿದೆ ಮತ್ತು ಸುಪ್ರೀಂ ಕೋರ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ “ಕೆಟ್ಟ ವರದಿ ಮಾಡಿದ ಯಾವುದೇ ಉದಾಹರಣೆಯಿಲ್ಲ” ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು