ಸುಪ್ರೀಮ್ ಕೋರ್ಟನ್ನೂ ಬಿಡದ ಕೋವಿಡ್ | ಅರ್ಧದಷ್ಟು ಉದ್ಯೋಗಿಗಳಿಗೆ ಸೋಂಕು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೋವಿಡ್ ಹರಡುವಿಕೆಯು ತೀವ್ರವಾಗಿದ್ದು, ಅದು ಸುಪ್ರೀಮ್ ಕೋರ್ಟನ್ನೂ ಆವರಿಸುತ್ತಿದೆ.

ಸರ್ವೋಚ್ಛ ನ್ಯಾಯಾಲಯದ ಅರ್ಧದಷ್ಟು ಉದ್ಯೋಗಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿದೆ. ಹಿನ್ನೆಲೆಯಲ್ಲಿ ನ್ಯಾಯಾಧೀಶರು ತನ್ನ ಮನೆಯಲ್ಲಿಯೇ ಉಳಿಯಲಿದ್ದಾರೆ. ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಕಲಾಪಗಳನ್ನು ಆಲಿಸಲಿದ್ದಾರೆ. ಕೋರ್ಟ್ ಕಾರ್ಯಗಳೂ ಎಂದಿಗಿಂತ ಒಂದು ಗಂಟೆ ತಡವಾಗಿಯೇ ಪ್ರಾರಂಭವಾಗಲಿದೆ.

ಭಾರತ ಒಕ್ಕೂಟ ರಾಜಧಾನಿ, ದೆಹಲಿಯಲ್ಲೂ ಕೊರೋನ ತೀವ್ರವಾಗಿ ಹರಡುತ್ತಿದ್ದು, ಪ್ರತಿದಿನವೂ ಒಂದೂವರೆ ಲಕ್ಷ ಮಂದಿಗೆ ಹೊಸದಾಗಿ ಸೋಂಕು ತಗಲುತ್ತಿದೆಮುಖ್ಯಮಂತ್ರಿ ಕೇಜ್ರಿವಾಲ್ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ಕಂಡು ಬಂದರೆ ಪೂರ್ಣ ಲಾಕ್ಡೌನ್ ಹೇರಲಾಗುವುದೆಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು