ಉತ್ತರ ಪ್ರದೇಶ(06-10-2020): ಸಂಭವಿಸಬಹುದಾದ ಹಿಂಸಾಚಾರವನ್ನು ತಪ್ಪಿಸಲು ರಾತ್ರಿಯಲ್ಲಿ ಹತ್ರಾಸ್ ಸಂತ್ರಸ್ತೆಯನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಯುಪಿ ಸರ್ಕಾರ ಅಫಿಡವಿಟ್ನಲ್ಲಿ ತಿಳಿಸಿದೆ.
ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಬೆಳಿಗ್ಗೆ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ತಪ್ಪಿಸಲು ರಾತ್ರಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವುದರಿಂದ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳು ಕೆಟ್ಟ ಉದ್ದೇಶಗಳೊಂದಿಗೆ ನಕಲಿ, ಸುಳ್ಳು ನಿರೂಪಣೆಯನ್ನು ಮಾಡಲು ಸಾಧ್ಯವಿಲ್ಲ. ಲಕ್ಷಾಂತರ ಪ್ರತಿಭಟನಾಕಾರರು ಸೇರಿ ಜಾತಿ, ಕೋಮು ಬಣ್ಣ ನೀಡುವ ಸಾಧ್ಯತೆ ಇತ್ತು ಎಂದು ಯುಪಿ ಸರಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಹತ್ರಾಸ್ ಸಂತ್ರಸ್ತೆ ಸಾವಿನ ಬಳಿಕ ಆಕೆಯನ್ನು ರಾತ್ರೋ ರಾತ್ರಿ 2.30ಕ್ಕೆ ಕುಟುಂಬಸ್ಥರ ವಿರೋಧದ ಮಧ್ಯೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಸುಟ್ಟು ಹಾಕಲಾಗಿತ್ತು. ಪ್ರಕರಣ ಇಡೀ ದೇಶದ ಕಣ್ಣುತೆರೆಯುವಂತೆ ಮಾಡಿತ್ತು.