ಕೋವಿಡ್ ರೋಗಿಗಳ ಐಡೆಂಟಿಟಿ ಬಹಿರಂಗ: ಸುಪ್ರೀಂ ಪೀಠ ಮಹತ್ವದ ಸೂಚನೆ

high court
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(09-12-2020):  ಕೋವಿಡ್ ರೋಗಿಗಳ ಮನೆಮುಂದೆ ಪೋಸ್ಟರ್ ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಸುಪ್ರೀಂಕೋರ್ಟ್ ನ ಜಸ್ಟೀಸ್ ಅಶೋಕ್ ಭೂಷಣ್, ಜಸ್ಟೀಸ್ ಆರ್. ಸುಭಾಶ್ ರೆಡ್ಡಿ ಹಾಗೂ ಜಸ್ಟೀಸ್ ಎಂ.ಆರ್.ಶಾ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆ ನೀಡಿದೆ.

ಅಧಿಕಾರಿಗಳು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ ಮಾತ್ರ ರಾಜ್ಯ ಸರ್ಕಾರ ಇಂತಹ ಪೋಸ್ಟರ್ ಗಳನ್ನು ಅಂಟಿಸಬಹುದಾಗಿದೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಕೋವಿಡ್ ಸೋಂಕಿತರ ಮನೆಯ ಮುಂದೆ ಪೋಸ್ಟರ್ ಅಂಟಿಸುವುದು ತಾರತಮ್ಮಕ್ಕೆ ಕಾರಣವಾಗಲಿದೆ ಎಂದು ಸುಪ್ರೀಂಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ವರದಿಯನ್ನು  ಕೂಡ ಕೇಳಿತ್ತು. ಈ ಬಳಿಕ ಸುಪ್ರೀಂ ಮಹತ್ವದ ಆದೇಶವನ್ನು ನೀಡಿದೆ. ಗೌಪ್ಯತೆಯ ಹಕ್ಕನ್ನು ಎತ್ತಿ ಹಿಡಿದಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು