ಚೆನ್ನೈ(18-10-2020): ಭಾರತೀಯ ನೌಕಾಪಡೆ ಸ್ಥಳೀಯವಾಗಿ ನಿರ್ಮಿಸಿದ ಸ್ಟೆಲ್ತ್ ಡೆಸ್ಟ್ರಾಯರ್ ಐಎನ್ಎಸ್ ಚೆನ್ನೈನಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ. ಕ್ಷಿಪಣಿಯು ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣ ವಾದ ತಂತ್ರಗಳನ್ನು ಮಾಡಿದ ನಂತರ ಪಿನ್-ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿತು.
ಬ್ರಹ್ಮೋಸ್ ಅನ್ನು ‘ಪ್ರಧಾನ ದಾಳಿ ಅಸ್ತ್ರ’ ಎಂದು ಪರಿಗಣಿಸಲಾಗುವುದು, ಇದು ಯುದ್ಧನೌಕೆಯ ಅಜೇಯತೆಯನ್ನು ಖಚಿತಪಡಿಸುತ್ತದೆ. ಇದು ದೂರಗಾಮಿ ನೆಲೆಗಳಲ್ಲಿ ನೌಕಾ ಮೇಲ್ಮೈ ಗುರಿಗಳನ್ನು ನಿಯೋಜಿಸುತ್ತದೆ. ಇದರಿಂದಾಗಿ ಭಾರತೀಯ ನೌಕಾಪಡೆಯ ಮತ್ತೊಂದು ಬಲ ಬಂದಂತಾಗಿದೆ.
ಬ್ರಹ್ಮೋಸ್ ನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ ಮತ್ತು ಉತ್ಪಾದಿಸಿದೆ ಎಂದು ಸಚಿವಾಲಯ ತಿಳಿಸಿದೆ. ಸೂಪರ್ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದ್ದಕ್ಕಾಗಿ ಡಿಆರ್ಡಿಒ, ಬ್ರಹ್ಮೋಸ್ ಮತ್ತು ಭಾರತೀಯ ನೌಕಾಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಡಿಆರ್ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಅವರು ವಿಜ್ಞಾನಿಗಳು ಮತ್ತು ಡಿಆರ್ಡಿಒ, ಬ್ರಹ್ಮೋಸ್, ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿಯನ್ನು ಯಶಸ್ವಿ ಸಾಧನೆಗಾಗಿ ಅಭಿನಂದಿಸಿದರು.