ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ‘ದಾದಾ ಸಾಹೇಬ್ ಪಾಲ್ಕೆ’ ಪ್ರಶಸ್ತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: 51ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಖ್ಯಾತ ನಟ ರಜನಿಕಾಂತ್‌ ಅವರಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ಮಾಹಿತಿ ನೀಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟರ್​​ನಲ್ಲಿ ಮಾಹಿತಿ ನೀಡಿರುವ ಜಾವಡೇಕರ್​​ ‘2019ನೇ ಸಾಲಿನ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್​ ಅವರ ಹೆಸರನ್ನು ಘೋಷಿಸಲು ಸಂತಸವಾಗುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನಿರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಅಪಾರ. ಈ ಪ್ರಶಸ್ತಿಯ ತೀರ್ಪುಗಾರರಾದ ಗಾಯಕಿ ಆಶಾ ಬೋಸ್ಲೆ, ನಿರ್ಮಾಪಕ ಸುಭಾಷ್​ ಘಾಯ್​, ನಟ ಮೋಹನ್​ಲಾಲ್​, ಗಾಯಕ ಶಂಕರ್​ ಮಹದೇವನ್​​ ಹಾಗೂ ಹಿರಿಯ ನಟ ಬಿಸ್ವಜೀತ್​ ಚಟರ್ಜಿ ಅವರಿಗೆ ಧನ್ಯವಾದಗಳು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ಸಿನಿರಂಗದಲ್ಲೇ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಅಗ್ರಗಣ್ಯ ಗೌರವವಾಗಿದೆ. ಈ ಹಿಂದೆ ಕನ್ನಡಿಗ ಡಾ.ರಾಜಕುಮಾರ್ ಅವರಿಗೂ ಈ ಪ್ರಶಸ್ತಿ ಗೌರವಿಸಲಾಗಿತ್ತು. ನಟ ನಿರ್ದೇಶಕ ರಜನಿಕಾಂತ್ ಅವರು ಮೂಲತಃ ಕನ್ನಡಿಗ, ನಂತರ ತಮಿಳು, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆಗೈದ ಖ್ಯಾತ ಸಿನಿ ಕಲಾವಿದರಿಗೆ ಈ ಗೌರವವನ್ನು ನೀಡಲಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು