ಮಂಡ್ಯ(14-11-2020): ಮಂಡ್ಯದ ಸಂಸದೆ ಸುಮಲತಾ ಅವರನ್ನು ಪ್ರತಾಪ್ ಸಿಂಹ ಟೀಕೆ ಮಾಡುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುಮಲತಾ ಬೆಂಬಲಿಗರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಸುಮಲತಾ ಅವರನ್ನು ಉದ್ದೇಶಿಸಿ, ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಪ್ರತಾಪ್ ಸಿಂಹ, ಆ ಯಮ್ಮಾ ಏನೂ ಮಾಡಲ್ಲ. ಮಂಡ್ಯದ ಕೆಲಸ ಏನೇ ಇದ್ದರೂ ನನಗೆ ಹೇಳಿ ಎಂದು ಮೊಬೈಲ್ ನಲ್ಲಿ ಹೇಳಿದ್ದರು.
ದೇವೇಗೌಡರ ಕುಟುಂಬವನ್ನು ಸೋಲಿಸುವ ಉದ್ದೇಶದಿಂದ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಅವರು ಯಾವ ಕೆಲಸ ಮಾಡುವುದಕ್ಕೂ ಬಿಡುವುದಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ ಎಂದು ಪ್ರತಾಪ್ ಸಿಂಹ ಹೇಳುವ ವಿಡಿಯೋ ವೈರಲ್ ಆಗಿದ್ದು, ಸುಮಲತಾ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ.