ಶಿಮ್ಲಾ(08-10-2020): ಮಣಿಪುರ ಮತ್ತು ನಾಗಾಲ್ಯಾಂಡ್ನ ಮಾಜಿ ಗವರ್ನರ್ ಮತ್ತು ಮಾಜಿ ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕ ಅಶ್ವನಿ ಕುಮಾರ್ ಅವರು ಬುಧವಾರ ಶಿಮ್ಲಾದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿರಿಯಾ ಪೊಲೀಸ್ ಅಧಿಕಾರಿ ಹುದ್ದೆಯಲ್ಲಿದ್ದವರು, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರು ಯಾಕೆ ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಉತ್ತರವಾಗಿ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ.
ಅವರು ಆತ್ಮಹತ್ಯೆ ಪತ್ರದಲ್ಲಿ ರೋಗ ಮತ್ತು ಅಸಮರ್ಥತೆಯಿಂದಾಗಿ ದಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಬರೆದಿದ್ದರು. ಅವರು ಜೀವನದ ಕೊನೆಯ ಸಮಸಯದಲ್ಲಿ ಜಿಗುಪ್ಸೆ ಮತ್ತು ಕಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆ ಸ್ವಂತ ಇಚ್ಛೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಮಾಜಿ ಸಿಬಿಐ ನಿರ್ದೇಶಕರು ಸಂಜೆ 7.00 ರ ಸುಮಾರಿಗೆ ಶಿಮ್ಲಾದಲ್ಲಿರುವ ತಮ್ಮ ನಿವಾಸದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 37 ವರ್ಷ ಸುದೀರ್ಘ ಸರಕಾರಿ ಉನ್ನತ ಸೇವೆಯಲ್ಲಿದ್ದ ಅಧಿಕಾರಿ ಯಾಕೆ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು, ನಿಜಕ್ಕು ಅಚ್ಚರಿ ಉಂಟು ಮಾಡಿದೆ.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರನ್ನು 2010ರಲ್ಲಿ ಬಂಧಿಸಿದ ವೇಳೆ ಇವರು ಸಿಬಿಐನ ನಿರ್ದೇಶಕರಾಗಿದ್ದರು.