ಆತ್ಮಾಹುತಿ ಕಾರು ಬಾಂಬ್ ಸ್ಪೋಟ| 30 ಪೊಲೀಸರು ಸಾವು, ಹಲವರಿಗೆ ಗಾಯ

car bomb blast
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾಬೂಲ್(29-11-2020): ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ಕನಿಷ್ಠ 30 ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ಮಿಲಿಟರಿ ಕ್ಯಾಂಪ್‌ ನಲ್ಲಿ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 30 ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸ್ಫೋಟದಿಂದ ದಟ್ಟವಾದ ಹೊಗೆ ಹಬ್ಬಿದೆ ನಗರದ ಹೊರವಲಯದಲ್ಲಿರುವ ಖಲಾ-ಎ-ಜೋಜ್ನಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಅಧಿಕಾರಿ ಹೇಳಿದರು.

ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ವಕ್ತಾರ ಜಹೀರ್ ಷಾ ನಿಕ್ಮಲ್ ಸಾವಿನ ಸಂಖ್ಯೆ ಹೆಚ್ಚಳದ ಸಾಧ್ಯತೆ ಬಗ್ಗೆ ಮಾಹಿತಿ  ನೀಡಿದ್ದಾರೆ.

ಗಜ್ನಿ ನಗರವನ್ನು ನೆರೆಯ ದಿಹ್ ಯಾಕ್ ಜಿಲ್ಲೆಗೆ ಸಂಪರ್ಕಿಸುವ ರಸ್ತೆಯೊಂದರಲ್ಲಿ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದ ನಂತರ ಒಬ್ಬ ಆತ್ಮಹತ್ಯಾ ಬಾಂಬರ್ ಸಾವನ್ನಪ್ಪಿದ್ದಾನೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ತಿಳಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು