ಸುಯೆಜ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗಿನ ಸಿಬ್ಬಂದಿಗಳೆಲ್ಲರೂ ಭಾರತೀಯರು: ವರದಿ | ವಿವಿಧ ಹಡಗುಗಳಲ್ಲಿರುವ ಆಡುಗಳು ಅಪಾಯದಲ್ಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೈರೋ: ಸುಯೆಜ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗಿನ ಎಲ್ಲಾ ಸಿಬ್ಬಂದಿಗಳೂ ಭಾರತೀಯರು ಎಂದು ವರದಿಯಾಗಿದೆ.

ಏಷ್ಯಾ ಮತ್ತು ಯುರೋಪಿನ ನಡುವೆ ಸರಕು ಸಾಗಾಟ ಮಾಡುವ ಎವರ್ ಗ್ರೀನ್ ಎಂಬ ಹೆಸರಿನ ದೈತ್ಯ ಹಡಗು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುಯೆಜ್ ಕಾಲುವೆಯಲ್ಲಿ ಸಿಲುಕಿತ್ತು. ಸುಯೆಜ್ ಕಾಲುವೆಯ ಇಕ್ಕಟ್ಟಾದ ಜಾಗದಲ್ಲಿ ಸಿಲುಕಿದ ಇದು, ಈಗಲೂ ಕಾಲುವೆಯಲ್ಲಿನ ಎಲ್ಲಾ ಹಡಗುಗಳ ಸಂಚಾರಕ್ಕೆ ತಡೆಯಾಗಿ ನಿಂತಿದೆ.

ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿಗಳೂ ಭಾರತೀಯರು ಎಂದು ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ. ಅದೇ ವೇಳೆ ಹಡಗಿನಲ್ಲಿ ಸಿಲುಕಿದ ಎಲ್ಲರೂ ಸುರಕ್ಷಿತರಾಗಿದ್ದಾರೆಂದು ಹಡಗಿನ ನಿರ್ವಹಣೆ ಮಾಡುವ ಕಂಪೆನಿ ಹೇಳಿಕೊಂಡಿದೆ.

ಹಡಗುಗಳ ಸಂಚಾರಕ್ಕೆ ತಡೆಯಾದ ಕಾರಣದಿಂದ ವಿವಿಧ ಹಡಗುಗಳಲ್ಲಿರುವ ಸುಮಾರು ಒಂದು ಲಕ್ಷದಷ್ಟು ಆಡುಗಳೂ ಅಪಾಯದಲ್ಲಿ ಸಿಲುಕಿದೆಯೆನ್ನಲಾಗಿದೆ. ಎರಡರಿಂದ ಮೂರು ದಿನಗಳಿಗಾಗುವಷ್ಟು ಆಡುಗಳ ಆಹಾರವಷ್ಟೇ ಹಡಗುಗಳ ದಾಸ್ತಾನುಗಳಲ್ಲಿದೆ. ಸಮಸ್ಯೆಯು ಆದಷ್ಟು ಬೇಗ ಪರಿಹಾರ ಕಾಣದಿದ್ದರೆ,  ಆಡುಗಳು ಸತ್ತು ಹೋಗಬಹುದೆಂಬ ಆತಂಕ ವ್ಯಕ್ತವಾಗಿದೆ.

ರಂಜಾನ್ ಹತ್ತಿರ ಬರುತ್ತಿರುವುದರಿಂದ  ಗಲ್ಫ್ ದೇಶಗಳು ವಿವಿಧ ಕಡೆಗಳಿಂದ ಆಡುಗಳನ್ನು ಇದೇ ದಾರಿಯ ಮೂಲಕ ಆಮದು ಮಾಡುತ್ತಿದೆ. ಹದಿನಾಲ್ಕು ಹಡಗುಗಳಷ್ಟೇ ಆಡು ಸಾಗಿಸುವ ಹಡಗುಗಳಾಗಿದ್ದು, ಸುಮಾರು ಮುನ್ನೂರಕ್ಕೂ ಹೆಚ್ಚು ಹಡಗುಗಳು ಇತರ ಸರಕುಗಳನ್ನು ಹೊತ್ತುಕೊಂಡು ನಿಂತಿದೆ. ಇದರಿಂದಾಗಿ ವಿವಿಧ ದೇಶಗಳಿಗೆ ಸರಕು ದೊರೆಯುವುದು ಸಾಕಷ್ಟು ವಿಳಂಬವಾಗಲಿದೆ.

ಸುಮಾರು 224,000 ಟನ್ ಸರಕು ಸಾಗಿಸುವ ಸಾಮರ್ಥ್ಯ ಹೊಂದಿರುವ ಜಪಾನಿನ ಹಡಗು ಸಿಲುಕಿದ ಜಾಗದ ಮರಳು ಮತ್ತು ಕೆಸರನ್ನು ತೆಗೆಯಲಾಗುತ್ತಿದೆ. ನಾಳೆ ಕಾರ್ಯಾಚರಣೆ ಪೂರ್ಣಗೊಂಡು ಸಂಚಾರ ಸುಗಮವಾಗಬಹುದೆಂದು ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಹದಿನಾಲ್ಕು ಟಗ್ ದೋಣಿಗಳನ್ನು(Tugboat) ಬಳಸಲಾಗಿದ್ದು, ಈಗಾಗಲೇ ಹಡಗು ಮೂವತ್ತು ಡಿಗ್ರಿಯಷ್ಟು ಸರಿದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು