ಭಯೋತ್ಪಾದಕರಿಗೆ ಆಶ್ರಯ ಕೊಡುವ ದೇಶಗಳ ಪಟ್ಟಿಯಿಂದ ತೆಗೆದು ಹಾಕಲು ಅಮೇರಿಕಾ ವಿಧಿಸಿದ ಷರತ್ತನ್ನು ಪಾಲಿಸಿದ ಸುಡಾನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕರ್ತೂಮ್(19-10-2020): ಭಯೋತ್ಪಾದಕರಿಗೆ ಆಶ್ರಯ ಕೊಡುವ ದೇಶಗಳ ಪಟ್ಟಿಯಿಂದ ಸುಡಾನ್ ದೇಶವನ್ನು ಅಮೇರಿಕಾ ತೆಗೆದು ಹಾಕಲಿದೆಯೆನ್ನಲಾಗಿದೆ. ಆದರೆ ಅದಕ್ಕೂ ಮೊದಲು ಮುನ್ನೂರ ಮೂವತ್ತೈದು ಮಿಲಿಯನ್ ಡಾಲರ್ ದಂಡ ಪಾವತಿಸಬೇಕೆಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಷರತ್ತು ವಿಧಿಸಿದ್ದರು.

1998 ರಲ್ಲಿ ಆಫ್ರಿಕಾದಲ್ಲಿ ಅಮೇರಿಕ ರಾಯಭಾರಿ ಕಚೇರಿಯ ಮೇಲೆ ನಡೆದ ದಾಳಿಗೆ ಪರಿಹಾರವಾಗಿ ಇಷ್ಟೊಂದು ಮೊತ್ತದ ಹಣವನ್ನು ಸುಡಾನ್ ಅಮೇರಿಕಾಗೆ ಪಾವತಿಸಬೇಕಾಗಿದೆ.

“ಮಹತ್ವದ ಸುದ್ದಿ. ಸುಡಾನ್ ಸರ್ಕಾರವು ಮಹತ್ವಪೂರ್ಣ ಬೆಳವಣಿಗೆಯನ್ನು ಮಾಡಿಕೊಂಡಿದೆ. ಅದು ಭಯೋತ್ಪಾದಕ ದಾಳಿಗೊಳಗಾದವರಿಗೂ, ಅವರ ಕುಟುಂಬಕ್ಕೂ ಮುನ್ನೂರ ಮೂವತ್ತೈದು ಮಿಲಿಯನ್ ಡಾಲರ್ ಪರಿಹಾರ ಪಾವತಿಸಲು ಸಮ್ಮತಿಸಿದೆ. ಪಾವತಿಯ ಬಳಿಕ ಸುಡಾನನ್ನು ಭಯೋತ್ಪಾದಕರಿಗೆ ಆಶ್ರಯ ಕೊಡುವ ದೇಶಗಳ ಪಟ್ಟಿಯಿಂದ ನಾನು ತೆಗೆದು ಹಾಕುವೆ. ಕೊನೆಗೂ ಅಮೇರಿಕಾ ಜನತೆಗೆ ನ್ಯಾಯ ಸಿಕ್ಕಿದೆ ಮತ್ತು ಸುಡಾನ್ ಪಾಲಿಗೆ ಮಹತ್ವದ ಹೆಜ್ಜೆ” ಎಂದು ಟ್ರಂಪ್ ತನ್ನ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ.

1993ರಲ್ಲಿ ಒಸಾಮ ಬಿನ್ ಲಾದೆನಿಗೆ ಆಶ್ರಯ ನೀಡಿದ ಬಳಿಕ ಅಮೇರಿಕಾವು ಸುಡಾನನ್ನು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ಪಟ್ಟಿಗೆ ಸೇರಿಸಿತ್ತು. ಸುಡಾನಿನ ಅತಿಥಿಯಾಗಿ ಲಾದೆನ್ ಅಲ್ಲಿ ನೆಲೆಸಿದ್ದ. ಸುಧೀರ್ಘ ಮೂವತ್ತು ವರ್ಷಗಳ ವರೆಗೆ ಸುಡಾನ್ ಅಧ್ಯಕ್ಷರಾಗಿದ್ದ ಉಮರ್ ಅಲ್ ಬಶರ್ ತೆರವಿನ ಬಳಿಕ ಅಮೇರಿಕಾ ಮತ್ತು ಸುಡಾನ್ ನಡುವಿನ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು