ತಮಿಳುನಾಡು(02-02-2021): ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ವಿ ಬಾಲು ಅವರನ್ನು ಕೊಂದ ಆರೋಪದ ಮೇಲೆ ತೂತುಕುಡಿ ಜಿಲ್ಲಾ ಪೊಲೀಸರು ಮಂಗಳವಾರ ಮೆಕ್ಯಾನಿಕ್ ಆರ್ ಮುರುಗವೆಲ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸರಕು ಸಾಗಣೆ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಪ್ರಕರಣದಲ್ಲಿ ಸಬ್ ಇನ್ಸ್ ಪೆಕ್ಟರ್ ವಿ ಬಾಲು ಮೃತಪಟ್ಟಿದ್ದರು. ಘಟನೆ ಬಗ್ಗೆ ತನಿಖೆಗೆ ಶ್ರೀವೈಕಂಟಂನ ಡಿಎಸ್ಪಿಗೆ ಸೂಚಿಸಲಾಗಿತ್ತು ಎಂದು ತೂತುಕುಡಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಯಲುಮಾರ್ ಹೇಳಿದರು. ಘಟನೆ ಬಗ್ಗೆ ತನಿಖೆಯಲ್ಲಿ ಹತ್ಯೆ ಎನ್ನುವುದು ತಿಳಿದು ಬಂದಿದೆ.
ಮುರುಗವೆಲ್ ವಿರುದ್ಧ ಭಾರತೀಯ ದಂಡ ಸಂಹಿತೆ – 353 ರ ಮೂರು ವಿಭಾಗಗಳ ಅಡಿಯಲ್ಲಿ (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಮತ್ತು 307 ಮತ್ತು 302 ರ ಅಡಿಯಲ್ಲಿ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಬಾಲು, ಕುಡಿದ ವಾಹನ ಚಲಾಯಿಸಿದ ಮುರುಗವೇಲ್ಗೆ ಎಚ್ಚರಿಕೆ ನೀಡಿದ್ದು, ಆತ ಓಡಿಸುತ್ತಿದ್ದ ಸರಕುಗಳ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಮರುದಿನ ಬೆಳಿಗ್ಗೆ ವಾಹನ ವಾಪಾಸ್ಸು ಮಾಡುವಂತೆ ಮುರುಗವೇಲು ಸಬ್ ಇನ್ಸ್ ಪೆಕ್ಟರ್ ಗೆ ಹೇಳಿದ್ದ. ನೀಡದ ಹಿನ್ನೆಲೆಯಲ್ಲಿ ಮುರುಗವೇಲ್ ಮತ್ತೊಂದು ಲೋಡ್ ವಾಹನವನ್ನು ತಂದು ಸಬ್ ಇನ್ಸ್ ಪೆಕ್ಟರ್ ಮೇಲೆ ಹರಿಸಿ ಹತ್ಯೆ ಮಾಡಿದ್ದಾನೆ.