ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು : ಸಚಿವ ಬಿ.ಸಿ ನಾಗೇಶ್‌ʼ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಕೋರ್ಟ್‌ ಆದೇಶದಂತೆ ಫೆಬ್ರವರಿ 14ರಿಂದ 10ನೇ ತರಗತಿವರೆಗೆ ಶಾಲೆ ಪುನಾರಂಭ ಮಾಡುತ್ತಿದ್ದೇವೆ. ದಯವಿಟ್ಟು ಮಕ್ಕಳನ್ನ ಸಮವಸ್ತ್ರದಲ್ಲಿಯೇ ಕಳುಹಿಸಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ‘ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು.

ದಯವಿಟ್ಟು ಸಮವಸ್ತ್ರದಲ್ಲೇ ವಿದ್ಯಾರ್ಥಿಗಳನ್ನ ಶಾಲೆಗೆ ಕಳುಹಿಸಿ. ಇನ್ನು ಇಂದು ಮತ್ತು ಸೋಮವಾರ ಮತ್ತೊಂದು ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕಾಲೇಜು ಪುನಾರಂಭ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.
ಅಂದ್ಹಾಗೆ, ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಾಗಿ ಹೈಕೋರ್ಟ್ ತ್ರಿ ಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದ್ದು, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ಇನ್ನು ರಾಜ್ಯದಲ್ಲಿ ಶೀಘ್ರವೇ ಕಾಲಾ-ಕಾಲೇಜು ಆರಂಭಿಸಿ ಎಂದು ಸೂಚಿಸಿದೆ.
ಹೈಕೋರ್ಟ್‌ ಆದೇಶದ ಬೆನ್ನೆಲ್ಲೇ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿದ್ದು, ‘ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲಾ-ಕಾಲೇಜು ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಹೈಸ್ಕೂಲ್‌ ಅಂದ್ರೆ 10ನೇ ತರಗತಿವರೆಗೆ ತರಗತಿಗಳನ್ನ ಆರಂಭಿಸಲಾಗುದು. ನಂತ್ರ ಪಿಯುಸಿ ಪ್ರಾರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು