ಶಾಲೆಗೆ ತೆರಳಿದ ಮೂವರು ವಿದ್ಯಾರ್ಥಿನಿಯರು ನಾಪತ್ತೆ

studentse
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ(02-03-2021):  ಶಹಜಹಾನ್ಪುರದಲ್ಲಿ ಮೂವರು ಅಪ್ರಾಪ್ತ ಬಾಲಕಿಯರು ಕಾಣೆಯಾಗಿದ್ದಾರೆ ಎಂದು ಪೊಲೀಸರು  ಮಂಗಳವಾರ ತಿಳಿಸಿದ್ದಾರೆ.

ಮೂವರು ವಿದ್ಯಾರ್ಥಿನಿಯರು ನಿನ್ನೆ ಶಾಲೆಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಮೂವರಲ್ಲಿ ಓರ್ವ ವಿದ್ಯಾರ್ಥಿನಿ 2700ರೂ. ನಗದು ಮತ್ತು ಬಟ್ಟೆಗಳನ್ನು ಶಾಲೆಯ ಕಾರ್ಯಕ್ರಮಕ್ಕೆಂದು ತೆಗೆದಕೊಂಡು ಹೋಗಿದ್ದಾಳೆ.

ಬಾಲಕಿಯರನ್ನು ಹುಡುಕಲು ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.

ಬಾಲಕಿಯರಲ್ಲಿ ಇಬ್ಬರು 15 ವರ್ಷ ವಯಸ್ಸಿನವರಾಗಿದ್ದರೆ, ಇನ್ನೊಬ್ಬರಿಗೆ 10 ವರ್ಷ ವಯಸ್ಸಾಗಿದೆ ಎಂದು ಅವರು ಹೇಳಿದರು. ಅಧಿಕಾರಿಗಳ ಪ್ರಕಾರ ಮೂವರು ಬಾಲಕಿಯರು ಸದರ್ ಪ್ರದೇಶದ ವಿವಿಧ ಪ್ರದೇಶಗಳಿಂದ ಶಾಲೆಗೆ ತೆರಳುತ್ತಿದ್ದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು