ತುಮಕೂರು (20-11-2020): ಅಂತರ್ ಜಾತಿ ವಿವಾಹಕ್ಕೆ ಕುಟುಂಬಸ್ಥರು ವಿರೋಧಿಸಿದರು ಎಂದು ಹೇಮಾವತಿ ನಾಲೆಗೆ ಹಾರಿ ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಇದೊಂದು ಕೊಲೆಯೋ ಎಂಬ ಶಂಕೆ ಕೂಡ ಮೂಡಿದೆ.
ಹಿರಿಸಾವೆ ಗ್ರಾಮದ ಸುಶ್ಮಿತ(18), ಮತಿಘಟ್ಟ ಗ್ರಾಮದ ರಮೇಶ್(19) ಅವರ ಮೃತದೇಹ ಬಟ್ಟೆಯಿಂದ ಕಟ್ಟಿಕೊಂಡು ನಾಲೆಗೆ ಜಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರಿಬ್ಬರು ವಿದ್ಯಾರ್ಥಿಗಳಾಗಿದ್ದು ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ ಇಬ್ಬರ ಜಾತಿ ಬೇರೆಯಾಗಿರುವುದರಿಂದ ಮನೆಯಲ್ಲಿ ವಿವಾಹಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.