ಗರ್ಲ್ ಫ್ರೆಂಡನ್ನು ಕೊಂದ 10ನೇ ತರಗತಿ ವಿದ್ಯಾರ್ಥಿ!

crime
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಂಭಾಲ್(20-11-2020): ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣೆಯಾದ 16 ವರ್ಷದ ಬಾಲಕಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಲಕಿ ಬುಧವಾರ ರಾತ್ರಿ ತನ್ನ ನೆರೆಯ 18 ವರ್ಷದ ಅರ್ಜುನ್ ಕುಮಾರ್ ಜೊತೆ ಓಡಿಹೋಗಿದ್ದಳು ಮತ್ತು ಪೊಲೀಸರು ಗುರುವಾರ ರಾತ್ರಿ ಶವವನ್ನು ಪತ್ತೆ ಮಾಡಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಗುನ್ನೌರ್ ಸರ್ಕಲ್ ಅಧಿಕಾರಿ ಕೃಷ್ಣ ಕಾಂತ್ ಸರೋಜ್ ಪ್ರಕಾರ, ಸಂತ್ರಸ್ತ ಬಾಲಕಿಯ ತಂದೆ ಕೊಲೆ ಆರೋಪಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ಆತನನ್ನು ವಶಕ್ಕೆ ಪಡೆದಿದ್ದೇವೆ.ಆತನನ್ನು ಪ್ರಶ್ನಿಸುವಾಗ, ಬಾಲಕ ಹುಡುಗಿಯ ಜೊತೆಗೆ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಸಡಿಲವಾದ ಹಗ್ಗದಿಂದಾಗಿ ಆತ್ಮಹತ್ಯೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾನೆ. ಆದರೆ ಆತನಿಗೆ ಕೃತ್ಯ ಎಸಗುವಷ್ಟು ಧೈರ್ಯವನ್ನು ನಾವು ಆತನಲ್ಲಿ ಕಂಡಿಲ್ಲ.  ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು