ಹಿಂದೂ ಮಹಿಳೆ- ಮುಸ್ಲಿಂ ಯುವಕನ ವಿವಾಹದ ವೇಳೆ ಪೊಲೀಸ್ ರೈಡ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ (04-12-2020): ಯುಪಿ ಪೊಲೀಸರು ಅಂತರ್ ಜಾತಿ ವಿವಾಹವನ್ನು ನಿಷೇಧಿಸಿ, ಹೊಸ ಮತಾಂತರ ವಿರೋಧಿ ಕಾನೂನು ಜಾರಿಗೆ ತಂದ ಬಳಿಕ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ನಡುವಿನ ವಿವಾಹ ಸಮಾರಂಭವನ್ನು ಪೊಲೀಸರು  ರದ್ದುಗೊಳಿಸಿದ್ದಾರೆ.

ಮತಾಂತರವನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರವು ಹೊಸ ಸುಗ್ರೀವಾಜ್ಞೆ ಮಾಡಿದ ಒಂದು ವಾರದ ನಂತರ, ರಾಜ್ಯ ರಾಜಧಾನಿ ಲಕ್ನೋದಲ್ಲಿ ಪೊಲೀಸರು ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ನಡುವಿನ ವಿವಾಹ ಸಮಾರಂಭವನ್ನು ನಿಲ್ಲಿಸಿದ್ದಾರೆ.

ಲಕ್ನೋದ ಪ್ಯಾರಾ ಪ್ರದೇಶದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಸಮಾರಂಭಗಳು ಪ್ರಾರಂಭವಾಗುವುದಕ್ಕೆ ಕೆಲವೇ ನಿಮಿಷಗಳ ಮೊದಲು, ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಯುವಕ ಮತ್ತು ಯುವತಿ ಕಡೆಯವರನ್ನು ಮನವೊಲಿಸಿ ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಮದುವೆಗೆ ಮೊದಲು ಅನುಮತಿ ಪಡೆಯಲು ಸೂಚಿಸಿದ್ದಾರೆ.

ಡಿಸೆಂಬರ್ 2 ರಂದು, ಒಂದು ಸಮುದಾಯದ ಹುಡುಗಿ ಮತ್ತೊಂದು ಸಮುದಾಯದ ಹುಡುಗನನ್ನು ಮದುವೆಯಾಗಲು ಬಯಸುತ್ತಿದ್ದಾಳೆ ಎಂಬ ಮಾಹಿತಿ ನಮಗೆ ಸಿಕ್ಕಿತು. ನಾವು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದು ಹೊಸ ಕಾನೂನುಬಾಹಿರ ಮತಾಂತರದ ಸುಗ್ರೀವಾಜ್ಞೆಯ ಪ್ರತಿಯನ್ನು ಅವರಿಗೆ ಹಸ್ತಾಂತರಿಸಿದೆವು ಮತ್ತು ಎರಡೂ ಕಡೆಯವರು ಕಾನೂನಿನ ಪ್ರಕಾರ, ಅವರು ಡಿಎಂ (ಜಿಲ್ಲಾ ಮ್ಯಾಜಿಸ್ಟ್ರೇಟ್) ಗೆ ಮಾಹಿತಿ ನೀಡಿ ಮುಂದುವರಿಯುವ ಮೊದಲು ಅನುಮತಿಯನ್ನು ಪಡೆಯಲು ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುರೇಶ್ ಚಂದ್ರ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು