ಮಂಗಳೂರು ಮಸೀದಿಯ‌ ಕಂಪೌಂಡ್ ಹಾರಿ ಹರಕೆ ಡಬ್ಬಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಜಪ್ಪು ಮುಹಿಯ್ಯುದ್ದೀನ್ ಜುಮ್ಹಾ ಮಸೀದಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಡ ರಾತ್ರಿ ವ್ಯಕ್ತಿಯೋರ್ವ ಮಸೀದಿ ಗೇಟನ್ನು ಹಾರಿ ಮಸೀದಿ ಆವರಣ ಪ್ರವೇಶಿಸಿ ಅಲ್ಲಿದ್ದ ಕಾಣಿಕೆ ಡಬ್ಬಿ ಕಳವು ಮಾಡಿದ್ದಾನೆ. ಕೃತ್ಯದ ದೃಶ್ಯಗಳು ಮಸೀದಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳತನದ ಬಗ್ಗೆ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಮುಝಮ್ಮಿಲ್ ಹುಸೈನ್ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು