ಗುಜರಾತ್(03-12-2020): ಮೋದಿಯ ಕನಸೆಂದು ಬಿಂಬಿತ ದೇಶದ ಅತಿಎತ್ತರದ ಏಕತಾ ಪ್ರತಿಮೆ ಟಿಕೆಟ್ ನಲ್ಲಿ ಭ್ರಷ್ಟಾಚಾರ ನಡೆದಿರುವುದು ಬಹಿರಂಗವಾಗಿದೆ.
ಸರ್ದಾರ್ ವಲ್ಲಭಾಯ್ ಪಟೇಲ್ ಪ್ರತಿಮೆ ವೀಕ್ಷಣೆಯ ಟಿಕೆಟ್ ಮಾರಾಟದಿಂದ ಸಂಗ್ರಹಿತ 5.24 ಕೋಟಿ ರೂ. ಅವ್ಯವಹಾರ ಕಂಡುಬಂದಿದೆ.
ಟಿಕೆಟ್ ಹಣವನ್ನು ಸಂಗ್ರಹಿಸಿದ ಏಜೆನ್ಸಿಯು ಟಿಕೆಟ್ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡದೆ ಮೋಸ ಮಾಡಿದೆ .ಈ ಕುರಿತು ಕೆಲವು ನೌಕರರ ವಿರುದ್ಧ ಕೇವಡಿಯಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏಜೆನ್ಸಿಯು ಟಿಕೆಟ್ ಮಾರಾಟದ ಹಣವನ್ನು ವಡೋದರಾದಲ್ಲಿನ ಖಾಸಗಿ ಬ್ಯಾಂಕ್ನಲ್ಲಿ ಏಕತಾ ಪ್ರತಿಮೆ ಆಡಳಿತ ಮಂಡಳಿ ಹೊಂದಿರುವ ಖಾತೆಗೆ ಸಂದಾಯ ಮಾಡಬೇಕಿತ್ತು. ಆದರೆ ಹಣ ಜಮೆ ಮಾಡದೆ ವಂಚನೆ ಮಾಡಲಾಗಿದೆ ಎನ್ನಲಾಗಿದೆ.