ರಾಜ್ಯದ ಶಾಲೆಗಳು ಪುನರಾರಂಭ: ಮಾರ್ಗಸೂಚಿಗಳು ಹೀಗಿವೆ; ಓದಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊರೊನಾ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ರಿಂದ 12 ನೇ ತರಗತಿಯ ಒಳಗಿನ ತರಗತಿಗಳನ್ನು ಪುನಃ ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಗಸ್ಟ್‌ 23 ರಿಂದ ಭೌತಿಕ ತರಗತಿಗಳು ಪ್ರಾರಂಭವಾಗಲಿದ್ದು, ಮಾರ್ಗಸೂಚಿಗಳು ಬಿಡುಗಡೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರದಂದು ತಜ್ಞರೊಂದಿಗಿನ ಸಭೆಯಲ್ಲಿ ಶಾಲೆ ಪುನರಾರಂಭದ ನಿರ್ಧಾರವನ್ನು ತಿಳಿಸಿದ್ದರು.

ಶಾಲಾ ಆವರಣಕ್ಕೆ ಪ್ರವೇಶಿಸುವ ಮೊದಲು, ಎಲ್ಲಾ ಪೋಷಕರು ಮತ್ತು ಶಾಲಾ ಸಿಬ್ಬಂದಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಹಾಕುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಶಾಲೆ ಪುನರಾರಂಭದ ಮಾರ್ಗಸೂಚಿಗಳು

 • ಶಾಲೆಗಳನ್ನು ಮತ್ತೆ ತೆರೆಯುವ ಮುನ್ನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ ಮುಖ್ಯ ಮಾರ್ಗಸೂಚಿಗಳು ಇಲ್ಲಿವೆ.
 • ಕೊರೊನಾ ಪಾಸಿಟಿವ್ ದರವು 2% ದಷ್ಟಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ಮತ್ತೆ ತೆರೆಯಲಾಗುವುದು.
 • ಶಾಲೆಗಳನ್ನು ಪುನಃ ತೆರೆದ ನಂತರ ಪಾಸಿಟಿವಿಟಿ ದರ ಮೀರಿದರೆ, ಶಾಲೆಗಳನ್ನು ತಕ್ಷಣವೇ ಒಂದು ವಾರದವರೆಗೆ ಮುಚ್ಚಲಾಗುತ್ತದೆ. ಪಾಸಿಟಿವಿಟಿ ದರವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ.
 • ವಿದ್ಯಾರ್ಥಿಗಳು ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಹ್ಯಾಂಡ್​​ ಸ್ಯಾನಿಟೈಸರ್​ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಛ ಮಾಡಲು ಅವಕಾಶ ನೀಡಬೇಕು. ಥರ್ಮಲ್​ ಸ್ಕ್ಯಾನರ್​ನಿಂದ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸಬೇಕು.
 • ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಢಾಯವಾಗಿ ಪೋಷಕರಿಂದ ಅನುಮತಿ ಪತ್ರದ ಜೊತೆಗೆ ಆರೋಗ್ಯ ಪ್ರಮಾಣ ಪತ್ರವನ್ನು ತರಬೇಕು. ಅನುಮತಿ ಪತ್ರವು ಕೊರೊನಾದ ಯಾವುದೇ ಲಕ್ಷಣಗಳಿಲ್ಲ ಎಂಬುವುದನ್ನು ದೃಢಪಡಿಸಿರಬೇಕು.
 • ಶಾಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು.
 • ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಯ ವಿವರವನ್ನು ಪ್ರತಿದಿನ ಪಡೆಯಬೇಕು.
 • ಯಾವುದೆ ವಿದ್ಯಾರ್ಥಿಗೆ ಕೆಮ್ಮು, ಜ್ವರ, ನೆಗಡಿ ಕಂಡು ಬಂದರೆ ಅಂತವರನ್ನು ತಾತ್ಕಾಲಿಕವಾಗಿ ಪ್ರತ್ಯೇಕವಾಗಿ ಇರಿಸಿ ಬಳಿಕ ಪೋಷಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸಬೇಕು.
 • ಫ್ರೌಢ ಶಾಲೆಗಳ (9 ಮತ್ತು 10ನೇ ತರಗತಿ) ಭೌತಿಕ ತರಗತಿಗಳನ್ನು ಬೆಳಗಿನ ಅವಧಿ ಮಾತ್ರ ನಡೆಸಬೇಕು.
 • ದೈಹಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮಾರ್ಗಸೂಚಿಗಳನ್ನು ಅನುಸರಿಸಬೇಕು.
 • ವಿದ್ಯಾರ್ಥಿಗಳು ಮನೆಯಿಂದಲೆ ಆಹಾರವನ್ನು ತರಬೇಕಾಗುತ್ತದೆ.
 • ಶಾಲೆಗೆ ಭೇಟಿ ನೀಡುವ ಪೋಷಕರ ಸಹಿತ ಶಾಲೆಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳೂ ಕಡ್ಡಾಯವಾಗಿ ಲಸಿಕೆಯನ್ನು ಪಡೆದಿರಬೇಕಾಗುತ್ತದೆ. ಜೊತೆಗೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
 • ಲಸಿಕೆ ಹಾಕದ ಸಿಬ್ಬಂದಿಯನ್ನು ಶಾಲಾ ಆವರಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

ರಾಜ್ಯದ ಕಾಲೇಜುಗಳು ಈಗಾಗಲೆ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು