ಅಲ್ಪಸಂಖ್ಯಾತರ ಇಲಾಖೆ ಪಾಲಿನ ಅನುದಾನ ಕಡಿತಗೊಳಿಸಿದ ಬಿಜೆಪಿ ಸರಕಾರ

yadiyoorappa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರ್ಗಿ(09-12-2020): ಅಲ್ಪಸಂಖ್ಯಾತರ ಪಾಲಿನ ಮೀಸಲನ್ನು ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಡಿತಗೊಳಿಸಿರುವ ಬೆಚ್ಚಿಬೀಳಿಸುವ ಸುದ್ದಿ ಬಹಿರಂಗವಾಗಿದೆ.

 ಮುಸ್ಲಿಂ ಚಿಂತಕರ ಚಾವಡಿಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಸ್ತಾನ್ ಬಿರಾದಾರ ಈ ಕುರಿತು ವಾಸ್ತವವನ್ನು ಬಿಚ್ಚಿಟ್ಟಿದ್ದು, ಅಲ್ಪಸಂಖ್ಯಾತರ ಇಲಾಖೆಗೆ 1,571 ಕೋಟಿ ಮೀಸಲಿಡಬೇಕಿದ್ದ ಅನುದಾನದಲ್ಲಿ 1005 ಕೋಟಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ನಿರ್ದೇಶನಾಲಯಕ್ಕೆ ಶೇ 45.97, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಶೇ 54, ಉರ್ದು ಅಕಾಡೆಮಿ ಶೇ 99, ಅಲ್ಪಸಂಖ್ಯಾತರ ಆಯೋಗದ ಅನುದಾನದಲ್ಲಿ ಶೇ 99ರಷ್ಟು ಕಡಿತವಾಗಿದೆ ಎಂದು ಹೇಳಿದ್ದಾರೆ.

ಅನುದಾನ ಕಡಿತದಿಂದಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿವೇತನ, ಪ್ರೋತ್ಸಾಹ ಧನ ಎಲ್ಲವೂ ನಿಂತು ಹೋಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು