ಸಿಕ್ಕಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದ ವ್ಯಕ್ತಿ| ಓರ್ವ ಸಾವು, ಇಬ್ಬರು ಗಂಭೀರ

man
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(18-10-2020): ಕೂಲಿ ಕಾರ್ಮಿಕನೋರ್ವ ಸಿಕ್ಕಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದು ಓರ್ವ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡು ಭಯದ ವಾತಾವರಣ ನಿರ್ಮಾಣ ವಾಗಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮಾರಿ (30) ಎಂದು ಗುರುತಿಸಲಾಗಿದೆ. ವೇಲಾಯುಧನ್, ಮುನಿಸ್ವಾಮಿ ಎಂಬುವವರು ಗಂಭೀರವಾಗಿದ್ದು, ಉಳಿದ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಎಂ.ಗಣೇಶ್ ಎಂಬಾತ ಈ ಕೃತ್ಯವನ್ನು ನಡೆಸಿದ್ದು, ಈತ ಬೆಳಿಗ್ಗೆ ಬಾಳೆಕಾಯಿ ಮಂಡಿ ಹತ್ತಿರ ಮಟನ್ ತರಲು ಹೋಗಿದ್ದ. ಆ ಸಂದರ್ಭದಲ್ಲಿ ಮಟನ್ ಶಾಪ್‍ನಲ್ಲಿದ್ದ ಚಾಕುವನ್ನು ತೆಗೆದುಕೊಂಡು ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲಾ ಇರಿದಿದ್ದಾನೆ.ಆಂಜನಪ್ಪಗಾರ್ಡನ್, ಛಲವಾದಿಪಾಳ್ಯ, ಭಕ್ಷುಗಾರ್ಡನ್ ಸೇರಿದಂತೆ 2 ಕಿ.ಮೀ. ದೂರದವರೆಗೂ ಓಡಾಡಿರುವ ಆರೋಪಿ ಗಣೇಶ್ ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲಾ ಇರಿದಿದ್ದಾನೆ.ಇದರಿಂದಾಗಿ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕದ ಪರಿಸ್ಥಿತಿಯೂ ಉಂಟಾಗಿತ್ತು. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೃತಪಟ್ಟ ವ್ಯಕ್ತಿಗೂ, ಗಾಯಳುಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದ್ದು, ಆರೋಪಿ ಯಾಕೆ ಈ ಕೃತ್ಯ ಮಾಡಿದ ಎಂದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು