ವಿಟ್ಲ :ಎಸ್ ವೈ.ಎಸ್. ವತಿಯಿಂದ ಮದ್ರಸ ಅಧ್ಯಾಪಕರಿಗೆ ದಿನಸಿ ಕಿಟ್ ವಿತರಣೆ

ssf
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ(16-10-2020): ಕೋವಿಡ್ ಕಾರಣದಿಂದ ಕೆಲಸ ಹಾಗೂ ವೇತನವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ನೂರಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರ ಕುಟುಂಬಕ್ಕೆ ಕರ್ನಾಟಕ ಎಸ್.ವೈ.ಎಸ್. ದ.ಕ.ಸಮಿತಿ ವತಿಯಿಂದ ದಿನ ಬಳಕೆಯ ಅಗತ್ಯ ದಿನಸಿ ಸಾಮಾನುಗಳ ಕಿಟ್ ಗಳನ್ನು ವಿವಿಧ ವಲಯ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತಿದ್ದುಇದರ ಭಾಗವಾಗಿ ವಿಟ್ಲ ವಲಯ ಎಸ್.ವೈ.ಎಸ್.ನೇತೃತ್ವದಲ್ಲಿ ಇಂದು ವಿಟ್ಲದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

   ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಲಯಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಅವರುಇಂದಿನ ಸಂದಿಗ್ಧ ಘಟ್ಟದಲ್ಲಿ ಅದೆಷ್ಟೋ ಮದ್ರಸ ಅಧ್ಯಾಪಕರ ಕುಟುಂಬ ಸಂಕಷ್ಟದಲ್ಲಿದ್ದುಅಂತಹ ಕುಟುಂಬಗಳಿಗೆ ನೆರವಾಗಲು ಸಂಘಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು.

   ಕಾರ್ಯಕ್ರಮವನ್ನು ವಲಯ ಹನೀಫ್ ದಾರಿಮಿ ಸವಣೂರು ಉದ್ಗಾಟಿಸಿದರು.‌ ಸಂಘಟನಯ ಕೋಶಾಧಿಕಾರಿ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿಪರ್ತಿಪ್ಪಾಡಿ ಜಮಾಅತ್ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿಎಸ್ಕೆಎಸ್ಸಸ್ಸೆಫ್ ಸಾಲೆತ್ತೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಸಲೀಂ ಪರ್ತಿಪ್ಪಾಡಿಪರ್ತಿಪ್ಪಾಡಿ ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಾಮು ಟಿಪ್ಪು ನಗರ,ಉಬೈದ್ ವಿಟ್ಲಬಝಾರ್ಅಬ್ದುರ್ರಹೀಂ ವಿಟ್ಲ ಮೊದಲಾದವರು ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು