ರೌಡಿಗಳು ಕಟ್ಟಿ ಹಾಕಿ ಥಳಿಸಿದ್ರೂ ಪತ್ರಕರ್ತ ಮಹಂತಾ ಪರ ಯಾರೂ ತುಟ್ಟಿಬಿಚ್ಚಿಲ್ಲ! ಅರ್ನಬ್ ಗೆ ಇದ್ದ ನ್ಯಾಯ ಮಹಂತಾಗಿಲ್ಲ!

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗುವಾಹಟಿ(19-11-2020): ಅಸ್ಸಾಂನಲ್ಲಿ ಪತ್ರಕರ್ತನ ಮೇಲೆ ಘೋರ ದಾಳಿ ನಡೆದು ಮೂರು ದಿನಗಳ ನಂತರ, ಪೊಲೀಸರು ಇನ್ನೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ಮುಂಬೈ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಪತ್ರಕರ್ತ ಅರ್ನಬ್ ನನ್ನು ಬಂಧಿಸಿದಾಗ ಧ್ವನಿ ಎತ್ತಿದ್ದ ಯಾವುದೇ ಕೇಂದ್ರ ಸಚಿವರು ಬಾಯ್ಬಿಟ್ಟಿಲ್ಲ. ಕನಿಷ್ಠ ಪಕ್ಷ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎನ್ನವುದು ವಿಪರ್ಯಾಸವಾಗಿದೆ.

ಗುವಾಹಟಿಯಿಂದ ಪಶ್ಚಿಮಕ್ಕೆ 45 ಕಿ.ಮೀ ದೂರದಲ್ಲಿರುವ ಮಿರ್ಜಾದಲ್ಲಿ ಪತ್ರಕರ್ತ ಮಿಲನ್ ಮಹಂತಾ ಅವರನ್ನು ಭಾನುವಾರ ರಸ್ತೆಯ ಮಧ್ಯದಲ್ಲಿ ಥಳಿಸಲಾಯಿತು. ಜೂಜುಕೋರರು ಮತ್ತು ಲ್ಯಾಂಡ್ ಮಾಫಿಯಾ ತಂಡದ ವಿರುದ್ಧ ವರದಿ ಮಾಡಿದ್ದಕ್ಕೆ ತಂಡವೊಂದು ಅವರನ್ನು ಥಳಿಸಿದೆ.

ತನ್ನ ಮೇಲೆ ಹಲ್ಲೆ ನಡೆದ ಸ್ಥಳದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಅಮರಂಗಾ ಗ್ರಾಮದಲ್ಲಿ ವಾಸಿಸುವ 42 ವರ್ಷದ ಪತ್ರಕರ್ತ, 20 ವರ್ಷಗಳಿಂದ ಅಸ್ಸಾಮಿಯ ದಿನಪತ್ರಿಕೆ ಅಸೋಮಿಯಾ ಪ್ರತಿದಿನ್ ಪತ್ರಿಕೆಯ ವರದಿಗಾರನಾಗಿದ್ದು, ಅಪರಾಧದ ಬಗ್ಗೆ ಆಗಾಗ್ಗೆ ಬರೆಯುತ್ತಿದ್ದರು.

ಅವರು ನನ್ನನ್ನು ಕೊಲ್ಲಲು ಬಯಸಿದ್ದರು.ನಾನು ಅವರ ವಿರುದ್ಧ ಸರಣಿ ವರದಿಗಳನ್ನು ಬರೆದಿದ್ದೇನೆ. ಅವರು ನನ್ನನ್ನು ಉಳಿಸಲು ಮುಂದೆ ಬಂದ ಜನರ ಮೇಲೂ ಹಲ್ಲೆ ನಡೆಸಲು ಪ್ರಯತ್ನಿಸಿದರು. ಘಟನೆ ನಡೆದು ಮೂರು ದಿನಗಳು ಕಳೆದಿವೆ, ಆದರೆ ಪೊಲೀಸರು ಕೇಳಲು ನನ್ನ ಮನೆಗೆ ಬಂದಿಲ್ಲ ಎಂದು ಸಂತ್ರಸ್ತ ಪತ್ರಕರ್ತ ಮಹಂತಾ ಹೇಳಿದ್ದಾರೆ.

ಸ್ಥಳೀಯ ಪತ್ರಕರ್ತರು ಪ್ರತಿಭಟನೆಗಾಗಿ ಬೀದಿಗಿಳಿದಿದ್ದಾರೆ. ಪತ್ರಕರ್ತನ ಮೇಲೆ ಇನ್ನೂ ದಾಳಿ ನಡೆಯುವ ಸಾಧ್ಯತೆ ಇದೆ. ಆದರೆ ಈವರೆಗೆ ಘಟನೆಗೆ ಸಂಬಂಧಿಸಿದಂತೆ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಬಂಧಿಸಲಾಗಿದೆ.

ವರದಿಗಾರನನ್ನು ಹಗಲು ಹೊತ್ತಿನಲ್ಲಿ ಕಂಬಕ್ಕೆ ಕಟ್ಟಿಹಾಕಲಾಯಿತು, ಆದರೆ ಪೊಲೀಸರು ಮುಖ್ಯ ಅಪರಾಧಿಗಳನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಪತ್ರಕರ್ತರನ್ನು ರಕ್ಷಿಸಲು ನಮಗೆ ಹೊಸ ಶಾಸನ ಬೇಕು ಎಂದು ಮಿರ್ಜಾ ಮೂಲದ ಪತ್ರಕರ್ತ ನಿರೇನ್ ಮಾಲಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು