ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನ ಸಂಸ್ಥೆಗಳ ವತಿಯಿಂದ ಕಡಿಮೆ ದರದಲ್ಲಿ ಕೊರೋನಾ ಪರೀಕ್ಷೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(8-11-2020): ಭಾರತೀಯ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್ ಜೆಟ್ ಮತ್ತು ಇಂಡಿಗೋಗಳು ಕಡಿಮೆ ದರದಲ್ಲಿ ಕೊರೋನಾ ಪರೀಕ್ಷೆ ನಡೆಸುವ ಸೌಲಭ್ಯ ಕಲ್ಪಿಸಲಿದೆ. ಇಚ್ಛಿಸುವವರನ್ನು ವಿಮಾನಕ್ಕೆ ಹತ್ತುವ ಮೊದಲು RT-PCR ಪರೀಕ್ಷೆಗೆ ಒಳಪಡಿಸಲಾಗುವುದು.

ಸ್ಟಮ್ಝ್ ಹೆಲ್ತ್ ಕೇರ್ ಸಹಭಾಗಿತ್ವದಲ್ಲಿ ಇಂಡಿಗೂ ಈ ಪರೀಕ್ಷೆಯನ್ನು ನಡೆಸಲಿದ್ದು, ಕೋರೋನಾ ಪರೀಕ್ಷೆಗೆ ಸ್ಟಮ್ಸ್ ನ ವೆಬ್‌ಸೈಟಿನಲ್ಲಿ ಮುಂಗಡವಾಗಿ ನೋಂದಣಿ ಮಾಡಿಕೊಳ್ಳಬೇಕಾಗುವುದು. ಅದರಲ್ಲಿ ಇಂಡಿಗೋ ಪ್ರಯಾಣಿಕರಿಗಾಗಿ ರೂಪಿಸಲಾದ ಲಿಂಕಿಗೆ ಹೋಗಬೇಕಾಗುತ್ತದೆ. ಅದರಲ್ಲಿ ಲ್ಯಾಬೋರೇಟರಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ವಾಸಸ್ಥಳದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಎಂಬ ಎರಡು ಆಯ್ಕೆಗಳಿರುತ್ತವೆ.

ಸ್ಪೈಸ್ ಜೆಟ್ ಸಂಸ್ಥೆಯು, ವಿಎಫ್ಎಸ್ ಗ್ಲೋಬಲ್ ಜೊತೆಗೂಡಿ ಇಂತಹ ಕೊರೋನ ಪರೀಕ್ಷಾ ನಡೆಸುವುದು. ಇದಕ್ಕಾಗಿ ಸ್ಪೈಸ್ ಜೆಟ್ಟಿನ ವೆಬ್ಸೈಟಿನಲ್ಲಿ add-on ಗೆ ಹೋಗಿ, ಕೋವಿಡ್ ಟೆಸ್ಟ್‌, RT-PCR ಟೆಸ್ಟ್ ಎಂದು ಆಯ್ಕೆ ಮಾಡಬೇಕಿದೆ. ಇಲ್ಲೂ ಲ್ಯಾಬೋರೇಟರಿ ಮತ್ತು ವಾಸಸ್ಥಳದ ಆಯ್ಕೆಗಳಿವೆ.

ಭಾರತ ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ ವಿಮಾನ ನಿಲ್ದಾಣಗಳಲ್ಲಿ ಹಾಗೂ ಕೊಲ್ಲಿ ದೇಶಗಳಲ್ಲಿ ಜೆಟ್ ಏರ್‌ವೇಸ್ ಮತ್ತು ಇಂಡಿಗೋಗಳು ಈ ಸೌಲಭ್ಯ ನೀಡಲಿದೆ. ಕೆಲವು ದೇಶಗಳು ತಮ್ಮ ದೇಶಗಳಿಗೆ ಪ್ರಯಾಣಿಸುವ ನಿರ್ದಿಷ್ಟ ಸಮಯದ ಮೊದಲು ಪ್ರಯಾಣಿಕರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಇವು ಇಂತಹ ಸೌಲಭ್ಯ ಕೊಡುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು