ಪಾಕ್ ಪರ ಘೋಷಣೆ ಎಂಬ ಸುಳ್ಳಾರೋಪದಲ್ಲಿ ಅಮಾಯಕರ ಬಂಧನ|ಮಂಗಳೂರಿನಲ್ಲಿ ನ್ಯಾಯಕ್ಕಾಗಿ ಬೀದಿಗಿಳಿದ ಸಾವಿರಾರು ಎಸ್ ಡಿಪಿಐ ಕಾರ್ಯಕರ್ತರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-01-2021): ಪಾಕ್ ಪರ ಘೋಷಣೆಯ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಫಿ ಬೆಳ್ಳಾರೆ, ಪಾಕ್ ಪರ ಘೋಷಣೆ ಮಾಡಿದ್ದಾರೆಂದು ಸುಳ್ಳು ಆರೋಪಗಳನ್ನು ಮಾಡಿ ಬಂಧಿಸಿರುವ ಅಮಾಯಕ ಮುಸ್ಲಿಂ ಯುವಕರನ್ನು ಬಿಡುಗಡೆಗೊಳಿಸಬೇಕು. ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು. ಕರ್ತವ್ಯ ಲೋಪ ಮಾಡಿದ ಬೆಳ್ತಂಗಡಿ ಇನ್ಸ್ ಪೆಕ್ಟರ್ ನಂದ ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಶ್ರಪ್ ಮಾಚಾರ್, ಅಥಾವುಲ್ಲ ಜೋಕಟ್ಟೆ, ಆಲ್ಪ್ರಾನ್ಸೊ ಫ್ರಾಂಕೋ, ಆನಂದ್ ಮಿತ್ತಬೈಲ್ ಸೇರಿ ಹಲವು ಎಸ್ ಡಿಪಿಐ ನಾಯಕರು  ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.

ಪ್ರತಿಭಟನಾಕಾರರನ್ನು ಕ್ಲಾಕ್ ಟವರ್ ಬಳಿ ಬ್ಯಾರಿಕೇಡ್ ಇಟ್ಟು ಎಸ್ಪಿ ಕಚೇರಿಗೆ ತೆರಳದಂತೆ ಪೊಲೀಸರು ತಡೆದಿದ್ದು, ಧರಣಿ ಮುಂದುವರಿದಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು