ಮೋದಿ ಸರಕಾರ ದೇಶದ ಆಡಳಿತವನ್ನು ಬಂಡವಾಳಶಾಹಿಯ ಕೈಗೊಪ್ಪಿಸಿದೆ; ಸೋನಿಯಾ ಗಾಂಧಿ ಆರೋಪ

soniya
Share on facebook
Share on twitter
Share on linkedin
Share on whatsapp
Share on telegram
Share on email
Share on print
ಹೊಸದೆಹಲಿ(19/10/2020): ‘ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರದ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ದೆಹಲಿಯಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಹಾಗೂ ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ‘ಪರಿಶಿಷ್ಟ ಜನರ ಮೇಲೆ ದೇಶಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೂ, ಮೋದಿ ಸರಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ಹುಟ್ಟಿಸುತ್ತಿದೆ. ಈ ಸರಕಾರಕ್ಕೆ ಜನರ ಮೇಲೆ ಕಾಳಜಿಯೇ ಇಲ್ಲವೇ? ಪ್ರಜಾಪ್ರಭುತ್ವ ಬಹಳ ಕಷ್ಟದ ದಿನಗಳನ್ನು ಎಣಿಸುತ್ತಿದೆ ‘ ಎಂದು ಅವರು ಆರೋಪಿಸಿದರು.
`ಹಾಗೆಯೇ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ.  ಹಸಿರು ಕ್ರಾಂತಿಯಿಂದ ಈ ದೇಶಕ್ಕೆ ಆಗಿರುವ ಲಾಭವನ್ನು ಅಳಿಸಿ ಹಾಕುವ ಪಿತೂರಿಯ ಭಾಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ’ ಎಂದು ದೂರಿದರು.
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು