ಅಹ್ಮದ್ ಪಟೇಲ್ ನಿಧನಕ್ಕೆ ದುಃಖಿತ ಸೋನಿಯಾ ಗಾಂಧಿ ಹೇಳಿದ್ದೇನು?

sonia gandhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ (25-11-2020): ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸಂಸದ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಸಂತಾಪ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ಹೇಳಿಕೆಯಲ್ಲಿ ತಾನು ‘ಒಡನಾಡಿ ಮತ್ತು ಸ್ನೇಹಿತನನ್ನು ಕಳೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ, ಅಹ್ಮದ್ ಪಟೇಲ್ ನಿಧನದ ಬಗ್ಗೆ ಪ್ರತಿಕ್ರಿಯಿಸಿ ನಾನು ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಅವರ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಅರ್ಪಿಸಲಾಗಿದೆ. ಅವರ ನಿಷ್ಠೆ ಮತ್ತು ಸಮರ್ಪಣೆಗೆ ಅಭಾರಿ. ಕರ್ತವ್ಯಕ್ಕೆ ಅವರ ಬದ್ಧತೆಯಿತ್ತು, ನನಗೆ ಸಹಾಯ ಮಾಡಲು ಅವರು ಯಾವಾಗಲೂ ಇದ್ದರು, ಅವರದು ಅಪರೂಪದ ಗುಣಗಳಾಗಿದ್ದು, ಅದು ಅವರನ್ನು ಇತರರಿಂದ ಪ್ರತ್ಯೇಕಿಸುತ್ತದೆ ಎಂದು ದುಃಖವನ್ನು ವ್ಯಕ್ತಪಡಿಸಿದರು.

ಅವರ ನಿಧನಕ್ಕೆ ನಾನು ಶೋಕಿಸುತ್ತಿದ್ದೇನೆ ಮತ್ತು ಅವರ ದುಃಖಿತ ಕುಟುಂಬಕ್ಕಾಗಿ ನಾನು ಸಾಂತ್ವಾನವನ್ನು ಹೇಳುತ್ತೇನೆ. ಅವರಿಗೆ ನಾನು ನನ್ನ ಪ್ರಾಮಾಣಿಕ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು