ಚೀನಾದ ಜನನ ಪ್ರಮಾಣ ಕುಸಿತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀಜಿಂಗ್: ಚೀನಾದಲ್ಲಿ ಜನನ ಪ್ರಮಾಣವು ಕಳೆದ ವರ್ಷ ದಾಖಲೆಯ ಕನಿಷ್ಟ ಮಟ್ಟಕ್ಕೆ ಇಳಿದಿದ್ದು ವಯಸ್ಸಾದವರ ಅನುಪಾತ ನಿರೀಕ್ಷಿಸಿದ್ದಕ್ಕಿಂತಲೂ ಅಧಿಕಗೊಂಡಿರುವುದು ಆರ್ಥಿಕ ಅಭಿವೃದ್ಧಿಯ ಆತಂಕವನ್ನು ಹೆಚ್ಚಿಸಬಹುದು ಎಂದು ಸರಕಾರ ಹೇಳಿದೆ.
ವಯಸ್ಸಾದವರ ಕಾರ್ಯಪಡೆ ಹೆಚ್ಚುತ್ತಿರುವುದು, ಅರ್ಥವ್ಯವಸ್ಥೆ ಮಂದಗತಿಯಲ್ಲಿ ಸಾಗಿರುವುದು ಮತ್ತು ಜನಸಂಖ್ಯೆಯ ಬೆಳವಣಿಗೆ ದಶಕದಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಚೀನಾ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಶ್ವದ 2ನೇ ಬೃಹತ್ ಅರ್ಥವ್ಯವಸ್ಥೆ ಎನಿಸಿರುವ ಚೀನಾದಲ್ಲಿ ಜನನ ಪ್ರಮಾಣ 1000 ಜನರಲ್ಲಿ 7.52ಕ್ಕೆ ಇಳಿದಿದ್ದು ಇದು 2020ರಲ್ಲಿ 8.52 ಆಗಿತ್ತು. 1978ರಲ್ಲಿ ದೇಶದ ವಾರ್ಷಿಕ ಅಂಕಿಅಂಶ ದಾಖಲೆ ಪುಸ್ತಕ ಆರಂಭವಾದಂದಿನಿಂದ ಮತ್ತು 1949ರಲ್ಲಿ ಕಮ್ಯುನಿಸ್ಟ್ ಚೀನಾ ಸ್ಥಾಪನೆಯಾದಂದಿನಿಂದ ಇದು ಅತ್ಯಂತ ಕನಿಷ್ಟ ಪ್ರಮಾಣವಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿಅಂಶ ಇಲಾಖೆ ಮಾಹಿತಿ ನೀಡಿದೆ.
2016ರಲ್ಲಿ ಒಂದೇ ಮಗು ಕಾರ್ಯನೀತಿಯಲ್ಲಿ ವಿನಾಯಿತಿ ನೀಡಿದ್ದ ಸರಕಾರ, ದಂಪತಿ 2 ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಆದರೂ ಜನನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ , 3 ಮಕ್ಕಳನ್ನು ಹೊಂದುವ ಅವಕಾಶವನ್ನು ಕಳೆದ ವರ್ಷದಿಂದ ನೀಡಲಾಗಿದೆ. 2021ರಲ್ಲಿ ದೇಶದಲ್ಲಿ 10.62 ಮಕ್ಕಳು ಜನಿಸಿದ್ದಾರೆ. ಸಹಜ ಜನಸಂಖ್ಯೆ ಬೆಳವಣಿಗೆ ದರ ಈ ಹಿಂದಿನ 1.45ಕ್ಕಿಂತ ಕಡಿಮೆಯಾಗಿ 0.34ಕ್ಕೆ (ಪ್ರತೀ 1000 ಜನರಿಗೆ) ಇಳಿಕೆಯಾಗಿದೆ ಎಂದು ಸರಕಾರದ ವರದಿ ಹೇಳಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು