ಆಮೆ ಮತ್ತು ಮಣ್ಣು ಮುಕ್ಕ ಹಾವು ಅಕ್ರಮ ಮಾರಾಟ ಯತ್ನ!

arrests
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಾಗರ(03-11- 2020): ಮಣ್ಣಮುಕ್ಕ ಹಾವು ಹಾಗೂ ಆಮೆ ಮಾರಾಟ ಜಾಲದ ಬಗ್ಗೆ ನಿಖರ ಮಾಹಿತಿಯನ್ನು ಪಡೆದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ  ಆಮೆ ಮತ್ತು ಮಣ್ಣಮುಕ್ಕ ಹಾವನ್ನು ವಶಕ್ಕೆ ಪಡೆದಿದ್ದಾರೆ.

ಡಿವೈಎಸ್ಪಿ ಸಿ.ಐ.ಡಿ ಮಂಜುನಾಥ್ ಅರಣ್ಯ ಘಟಕ ಬೆಂಗಳೂರುರವರುಗಳ ಮಾರ್ಗದರ್ಶನದಲ್ಲಿ ಸಾಗರ ಅರಣ್ಯ ಸಂಚಾರಿದಳದ  ಪೊಲೀಸ್  ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್. ಬಿ   ಹಾಗೂ  ತಂಡದಲ್ಲಿದ್ದ ಸಿಬ್ಬಂದಿಗಳಾದ ರಂಗನಾಥ, ಗಣೇಶ್, ರತ್ನಾಕರ್, ಗಿರೀಶ್ . ವಿಶ್ವನಾಥ ರವರುಗಳು  ಕಾನೂನು ಬಾಹಿರವಾಗಿ ಆಮೆ ಮತ್ತು ಮಣ್ಣು ಮುಕ್ಕ ಹಾವಿನ ಮಾರಾಟಕ್ಕೆ ತೊಡಗಿದ್ದ ಜಾಲವನ್ನು ಬೆನ್ನತ್ತಿದ್ದು, ದಾವಣಗೆರೆ ಹರಿಹರ ನಗರದಲ್ಲಿ ಆರೋಪಿಗಳನ್ನು ಬಂದಿಸಿ  ಆಮೆ ಮತ್ತು ಮಣ್ಣಮುಕ್ಕ ಹಾವನ್ನು ವಶಕ್ಕೆ ಪಡೆದಿದ್ದಾರೆ .

ರಮೇಶ್ ನಾಯ್ಕ ಬಿನ್ ಮಂಗಲ್ಯ ನಾಯ್ಕ  ವೀರಗಾರನ ಬೈರಕೊಪ್ಪ ಶಿವಮೊಗ್ಗ ತಾಲೂಕು, ಜಗದೀಶ ರಾಮಪ್ಪ ತಿಮ್ಮಜ್ಜಿ ಬಿನ್ ರಾಮಪ್ಪ ತಿಮ್ಮಜ್ಜಿ   ಕಜ್ಜರಿ ಗ್ರಾಮ ರಾಣಿಬೆನ್ನೂರು ತಾಲೂಕು, ಹರೀಶ ಬಿನ್ ಪಾಂಡುರಂಗ ಹೊನ್ನೂರು ಗ್ರಾಮ ದಾವಣಗೆರೆ ತಾಲೂಕು, ನಾಗೇಂದ್ರ ಬಿನ್ ಲಿಂಗೋಜಿ ಬಾಳೂರು, ಹಾಲುಗುಡ್ಡೆ ಹೊಸನಗರ ಬಂಧಿತ ಆರೋಪಿಗಳು. ಇವರುಗಳ ಮೇಲೆ ಸಾಗರ ಅರಣ್ಯ ಸಂಚಾರಿ ದಳದ ಪೋಲಿಸ್ ಠಾಣೆಯಲ್ಲಿ  ವನ್ಯಜೀವಿಗಳ ಸಂರಕ್ಷಣ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ಕೋಗಲೂರು ಕುಮಾರ್

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು