ಬೆಂಗಳೂರು(28-02-2021): ಸಾಹಿತಿ ಎಸ್ ಎಲ್ ಬೈರಪ್ಪ ವಿರುದ್ಧ ತಿಗಳ ಸಮುದಾಯ ಆಕ್ರೋಶಗೊಂಡಿದ್ದು, ತಮ್ಮ ಸಮುದಾಯದ ಆರಾಧ್ಯ ದೇವತೆ ದ್ರೌಪದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೇವನಹಳ್ಳಿಯಲ್ಲಿ ವಹ್ನಿಕುಲ ಸಂಘ ದೂರು ದಾಖಲಿಸಿದೆ.
ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ತಿಗಳ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿ ಎಸ್ ಎಲ್ ಬೈರಪ್ಪ ಮಾತನಾಡಿದ್ದಾರೆ. ಅವರು ಕ್ಷಮೆಯಾಚಿಸಿಲ್ಲ ಎಂದಾದರೆ ಮನೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ತಿಗಳ ಸಮುದಾಯ ಎಚ್ಚರಿಕೆ ನೀಡಿದೆ.