ನವದೆಹಲಿ(30-01-2021): ಸಿಂಗು ಗಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನಾ ನಿರತ ರೈತರು ಮತ್ತು ಸ್ಥಳೀಯರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 44 ಜನರನ್ನು ಬಂಧಿಸಿದ್ದಾರೆ.
ದೆಹಲಿಯ ಅಲಿಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಖಾಜಿಪುರ್ ಗ್ರಾಮದ ನಿವಾಸಿ ರಂಜೀತ್ ಸಿಂಗ್, ಪಂಜಾಬ್ ನ ನಯಾ ಶೆಹರ್, ಪಿಎಸ್ ರಾಹು, ಎಂಬವರನ್ನು ಅಲಿಪುರ ಎಸ್ಎಚ್ಒ ಮೇಲೆ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಂಗು ಗಡಿಯಲ್ಲಿ ನಿನ್ನೆ ಪರಿಸ್ಥಿತಿ ಹದಗೆಟ್ಟಿದ್ದು, ರೈತರೊಂದಿಗೆ ಕೆಲ ದುಷ್ಕರ್ಮಿಗಳು ಘರ್ಷಣೆ ನಡೆಸಿದರು. ದುಷ್ಕರ್ಮಿಗಳ ತಂಡದಲ್ಲಿ 200ಕ್ಕೂ ಅಧಿಕ ಜನರಿದ್ದು ಶಸ್ತ್ರಸಜ್ಜಿತವಾಗಿದ್ದರು.
ಈ ಗುಂಪು ರೈತರ ಡೇರೆಗಳನ್ನು ಹಾನಿಗೊಳಿಸಿದ್ದು, ಇದರಿಂದಾಗಿ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆಯಿತು. ಒಂದು ಗಂಟೆಯ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.