ಮಹಾರಾಷ್ಟ್ರ (01-02-2021): ಆತ್ಮ ನಿರ್ಭರ ಅಲ್ಲ ಅತ್ಮ ಬರ್ಬರ ಬಜೆಟ್ ನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆಯಿಲ್ಲ ಎಂದು ನಿನ್ನೆಯೇ ಹೇಳಿದ್ದೇನೆ.ಇದು ಇವತ್ತು ನಿಜವಾಗಿದೆ. ಕೇಂದ್ರ ಸರ್ಕಾರ ದಿವಾಳಿ ಬಜೆಟ್ ಮಂಡಿಸಿದೆ. ಕೃಷಿ ಕ್ಷೇತ್ರದ ಮೇಲೆ 100ವರೆಗೆ ಸೆಸ್ ವಿಧಿಸಿದ್ದಾರೆ. ಕೃಷಿ ಯಂತ್ರೋಪರಣಗಳ ಮೇಲೆ ಸೆಸ್ ಹಾಕಲಾಗಿದೆ. ಇದ್ಯಾವ ಅರ್ಥ ವ್ಯವಸ್ಥೆ ನನಗೆ ತಿಳಿಯುತ್ತಿಲ್ಲ. ಇದರ ಬದಲು ರೈತರಿಗೆ ಬಡ್ಡಿಯಿಲ್ಲದ ಸಾಲ ನೀಡಬಹುದಿತ್ತು ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಕೋವಿಡ್ ಸಂದರ್ಭದಲ್ಲೂ ಒಳ್ಳೆಯ ಬಜೆಟ್ ಮಂಡಿಸಿದೆ, ಕೃಷಿಗೆ ಹೆಚ್ಚು ಆದ್ಯತೆ ನೀಡಿದೆ. ಇದು ಬಡವರ ಪರ ಬಜೆಟ್ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.