ಗೋಹತ್ಯೆ ನಿಷೇಧ, ಲವ್​ ಜಿಹಾದ್ ಬಗ್ಗೆ ಸಿದ್ದರಾಮಯ್ಯ ನಿಲುವೇನು? ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ನಡೆಯೇನು?

siddaramayya
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (01-12-2020): ಚಳಿಗಾಲದ ಅಧಿವೇಶನದಲ್ಲಿ ಗೋ ಹತ್ಯಾ ನಿಷೇಧ ಮಸೂದೆ ಮತ್ತು ಲವ್​ ಜಿಹಾದ್​ ಕುರಿತಾಗಿ ಮಸೂದೆ ಮಂಡಿಸಿದರೆ ನಾವು ವಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾದರೆ ನಾವು ಅದನ್ನು ವಿರೋಧ ಮಾಡುತ್ತೇವೆ. ಈ ಕುರಿತು ಮುಸ್ಲಿಂ ನಿಯೋಗ ಬಂದು ನನ್ನ ಜತೆ ಚರ್ಚೆ ಮಾಡಿದೆ.ನಾನು ಅವರಿಗೆ ವಿರೋಧಿಸುವ ಬಗ್ಗೆ ಹೆಳಿದ್ದೇಮೆ.  ಬಿಜೆಪಿ ಅಧಿಕಾರಲ್ಲಿರುವ ಗೋವಾದಲ್ಲಿ ಈ ಕಾನೂನು ಜಾರಿಯಿಲ್ಲ. ಇಲ್ಲಿ ರಾಜಕೀಯಕ್ಕೆ ಈ ಕಾಯ್ದೆ ಜಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಲವ್ ಜಿಹಾದ್ ಕಾನೂನು ಅವಿವೇಕಿಗಳು ತರುತ್ತಿರುವ ಕಾನೂನು. 18 ವರ್ಷದ ಬಳಿಕ ಮದುವೆ ಆಗುವುದು ಅವರವರಿಗೆ ಬಿಟ್ಟಿದ್ದು. ಯಾರನ್ನೂ ತಡೆಯಲು ಸಾಧ್ಯವಿಲ್ಲ. ಇದೊಂದು ಸಂವಿಧಾನ ವಿರೋಧಿ ಪ್ರಸ್ತಾಪ ಎಂದು ಹೇಳಿದ್ದಾರೆ.

ಇನ್ನು ಲವ್ ಜಿಹಾದ್ ಮತ್ತು ಗೋಹತ್ಯಾ ನಿಷೇಧ ಕಾಯ್ದೆಗಳು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ರಾಜ್ಯ ಸರಕಾರ ಹೇಳಿದೆ. ಈ ಮಧ್ಯೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇವೆರಡು ಕಾಯ್ದೆಗಳು ಅಮಾಯಕ ಮುಸ್ಲಿಮರ ಮೆಲಿನ ದೌರ್ಜನ್ಯಕ್ಕೆ ಅನುಮತಿ ಮತ್ತು ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು