ಸಿದ್ಧಾಂತಗಳು ಹೋಲುತ್ತಿದ್ದರೆ, ರಜನಿ ಜೊತೆ ಮೈತ್ರಿ: ಕಮಲ್ ಹಾಸನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ(15-12-2020): ನಮ್ಮ ಸಿದ್ಧಾಂತಗಳು ಹೋಲುತ್ತಿದ್ದು, ಜನರಿಗೆ ಉಪಕಾರವಾಗುವಂತಿದ್ದರೆ ರಜನಿ ಜೊತೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಜನರಿಗೆ ಉಪಕಾರವಾಗುವುದಾದರೆ ನಮ್ಮ ಅಹಮ್ಮನ್ನು ಬದಿಗಿಡಲೂ ತಯಾರಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಈಗಾಗಲೇ ಮಕ್ಕಳ್ ನೀದಿ ಮಯ್ಯಮ್ ಪಕ್ಷ ಸ್ಥಾಪಿಸಿ, ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಕಮಲ್ ಹಾಸನ್ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಸುದ್ದಿಗಾರರ “ನೀವು ರಜನಿ ಜೊತೆ ಮೈತ್ರಿ ಮಾಡುವಿರಾ?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಈ ಹೇಳಿಕೆ ನೀಡಿದ್ದಾರೆ.

ಅತ್ತ ರಜನಿ ಕೂಡಾ ಡಿಸೆಂಬರ್ ಮೂವತ್ತೊಂದರಂದು ತಮ್ಮ ಹೊಸ ಪಕ್ಷ ಸ್ಥಾಪಿಸಲಾಗುವುದೆಂದು ಮುಹೂರ್ತ ನಿಗದಿ ಪಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್, ಬಿಜೆಪಿಗಳು ಕೂಡಾ ಸೆಲೆಬ್ರೆಟಿಗಳನ್ನು ಕಣಕ್ಕಿಳಿಸಿವೆ. ತಮಿಳುನಾಡು ರಾಜಕೀಯವು ಅನುದಿನವೂ ಕುತೂಹಲ ಕೆರಳಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು