ಜೂನ್ ಏಳರಂದು ಲಾಕ್ಡೌನ್ ಕೊನೆಯಾಗುತ್ತಾ!? ಬಿಎಂಟಿಸಿ ಸಿಬ್ಬಂದಿಗಳಿಗೆ ಜೂನ್ ಏಳರಿಂದ ಕರ್ತವ್ಯಕ್ಕೆ ಹಾಜರಾಗಲು ಆದೇಶ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಜೂನ್ ಏಳರಂದು ಲಾಕ್ಡೌನ್ ಕೊನೆಯಾಗುತ್ತಾ? ಇಂತಹ ಒಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಯಾಕೆಂದರೆ, ಬಿಎಂಟಿಸಿ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಜೂನ್ ಏಳರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ!

ಹೀಗಿದ್ದರೂ ಜೂನ್ ಏಳರ ಬಳಿಕವೂ ಲಾಕ್ಡೌನ್ ಜಾರಿಯಾಗಬಹುದು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಸುತ್ತೋಲೆಯಲ್ಲಿ “07-06-2021ರಿಂದ ಹಂತ ಹಂತವಾಗಿ ಅನುಸೂಚಿಗಳ ಆಚರಣೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ.” ಎಂಬ ಪದಗಳ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಅನ್ಲಾಕ್ ಮಾಡದೇ, ಹಂತಹಂತವಾಗಿ, ನಿಗದಿತ ಪ್ರಮಾಣದಲ್ಲಿ ಪ್ರಾರಂಭ ಮಾಡಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸರಕಾರವು ಲಾಕ್ಡೌನ್ ಕೊನೆಗೊಳಿಸದಿದ್ದರೂ ಅತ್ಯಗತ್ಯ ಸೇವೆಗಳಲ್ಲಿ ಇನ್ನಷ್ಟು ರಿಯಾಯಿತಿಗಳನ್ನು ನೀಡಬಹುದೆಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಆದೇಶದಂತೆ, ಬಿಎಂಟಿಸಿಯು ಅತ್ಯವಶ್ಯಕ ಸೇವೆಯಡಿ ಸಾರ್ವಜನಿಕ ಪ್ರಯಾಣಿಕರಿಗೆ ಸುಗಮ ಮತ್ತು ಸಮರ್ಪಕ ಸಾರಿಗೆ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ದಿನಾಂಕ 07-06-2021 ರಿಂದ ಹಂತ ಹಂತವಾಗಿ ಅನುಸೂಚಿಗಳ ಆಚರಣೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ

ಕೋವಿಡ್-19 ಸೋಂಕು ಪತ್ತೆ ಹಚ್ಚಲು ಹಾಗೂ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಘಟಕದ ಎಲ್ಲಾ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳು ಸೂಚಿಸಿರುವಂತೆ ಎಲ್ಲಾ ಚಾಲನಾ, ತಾಂತ್ರಿಕ, ಆಡಳಿತ ಶಾಖೆಯ ಸಿಬ್ಬಂದಿಗಳು ದಿನಾಂಕ 07-06-2021 ರಿಂದ ದೈನಂದಿನ ಕರ್ತವ್ಯಕ್ಕೆ ಹಾಜರಾಗುವುದು.

ಪ್ರಸ್ತುತ ಮೇ ಮಾಹೆಯ ಕೊನೆಯಲ್ಲಿದ್ದು, ವೇತನ ಪಾವತಿ ಸಂಬಂಧಿಸಿತ ನಿರ್ದೇಶನಗಳು ಜಾರಿಯಾಗಲಿದ್ದು, ತತ್ಸಂಬಂಧ ಪೂರಕ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿ ಶಾಖೆ, ಶಿಸ್ತು ಶಾಖೆ ಮತ್ತು ವೇತನ ಬಿಲ್ ಸಿದ್ದಪಡಿಸುವ ವಿಷಯ ನಿರ್ವಾಹಕರು ಹಾಗೂ ಚೀಟಿ, ನಗದು, ಇಂಧನ, ಉಗ್ರಾಣ ಶಾಖೆಯ ವಿಷಯ ನಿರ್ವಾಹಕರು ಕೂಡಲೇ ತಪ್ಪದೇ ದಿನಾಂಕ 07-06-2021ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಒಂದು ವೇಳೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ಮೇಲೆ ಸಂಸ್ಥೆಯ ನಿಯಮಾವಳಿಯಂತೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ಜೂನ್ 30 ರ ವರೆಗೂ ಲಾಕ್ಡೌನ್ ವಿಸ್ತರಿಸಲು ಶಾಸಕ ಎಚ್. ಡಿ. ರೇವಣ್ಣ ಆಗ್ರಹಿಸಿದ್ದಾರೆ. ಹಾಗೆಯೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನೂ ಮುಂದೂಡಬೇಕೆಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು