ಉತ್ತರ ಪ್ರದೇಶ(01-10-2020): ಅಸ್ಸಾಂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಅಸ್ಸಾಂನ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ.
ಅಸ್ಸಾಂ ಪೊಲೀಸರ ತಂಡವೊಂದು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಅಸ್ಸಾಂನ ಆಡಳಿತ ಪಕ್ಷದ ಮುಖಂಡ ದಿಬನ್ ದೇಕಾ ಅವರನ್ನು ಹೊಸದಾಗಿ ರೂಪುಗೊಂಡ ಬಜಾಲಿ ಜಿಲ್ಲೆಯ ಪಟಾಚಾರ್ಕುಚಿ ಪ್ರದೇಶದಿಂದ ಬಂಧಿಸಿದೆ.
ಅಸ್ಸಾಂ ಪೊಲೀಸರ ವಿಶೇಷ ಶಾಖೆಯ (ಎಸ್ಬಿ) ಐಜಿಪಿ ಹಿರೆನ್ ನಾಥ್ ಮಾತನಾಡಿ, ಭದ್ರತಾ ಕಾರಣಗಳಿಗಾಗಿ ಪೊಲೀಸರು ಅಸ್ಸಾಂನ ಕಹಿಲಿಪರಾ ಪ್ರದೇಶದಲ್ಲಿರುವ ವಿಶೇಷ ಶಾಖೆಯ ಕಚೇರಿ ಆವರಣಕ್ಕೆ ದಿಬನ್ ದೇಕಾ ಅವರನ್ನು ಕರೆದೊಯ್ದಿದ್ದಾರೆ.
ಅಸ್ಸಾಂ ಪೊಲೀಸ್ ಇಲಾಖೆಯ 597 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಜೆಪಿ ನಾಯಕ ದಿಬನ್ ದೇಕಾ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿತ್ತು.