ಜಿದ್ದಾ(19-10-2020): ಸೌದಿಯಲ್ಲಿ ಉನ್ನತ ವಿದ್ವಾಂಸ ಮಂಡಳಿ ಮತ್ತು ಶೂರಾ ಕೌನ್ಸಿಲ್ ಪುನರ್ರಚನೆಗೊಂಡಿತು. ಇವು ಸೌದಿ ಅರೇಬಿಯಾದ ಅತ್ಯುನ್ನತ ಸಮಿತಿಗಳಾಗಿದ್ದು, ಈ ಬಾರಿ ಶೂರಾ ಕೌನ್ಸಿಲ್ ಉಪಸ್ಪೀಕರಾಗಿ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ.
ಅಧಿಕಾರವಧಿ ಮುಗಿದುಹೋದ ಕಾರಣದಿಂದಾಗಿ ಇದೀಗ ಇವು ಪುನರ್ರಚನೆಗೊಂಡವು. ಎರಡೂ ಮಂಡಳಿಗಳನ್ನು ಸೌದಿ ಸುಪ್ರೀಂ ಕೋರ್ಟ್ ಮತ್ತು ದೊರೆ ಸಲ್ಮಾನ್ ಜೊತೆಗೂಡಿ ರಚಿಸುತ್ತಾರೆ.
ವಿದ್ವಾಂಸ ಮಂಡಳಿಯ ನೇತೃತ್ವ ನ್ನು ಸೌದಿ ಗ್ರಾಂಡ್ ಮುಫ್ತಿ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲ ಅಲ್ ಶೈಖ್ ವಹಿಸುತ್ತಿದ್ದಾರೆ. ಇದರಲ್ಲಿ ಇಪ್ಪತ್ತು ಸದಸ್ಯರಿರುತ್ತಾರೆ ಮತ್ತು ಶೂರಾ ಕೌನ್ಸಿಲಿನಲ್ಲಿ ನೂರೈವತ್ತು ಸದಸ್ಯರು. ನಾಲ್ಕು ವರ್ಷದ ಅಧಿಕಾರವಧಿಯಿರುವ ಈ ಸಮಿತಿಗೆ ಈ ಬಾರಿ ಹನಾನ್ ಬಿಂತ್ ಅಬ್ದುಲ್ ರಹೀಮ್ ಅಲ್ ಅಹ್ಮದಿ ಎಂಬ ಮಹಿಳಾ ವಿದ್ವಾಂಸೆಯೂ ಉಪಸ್ಪೀಕರಾಗಿ ನೇಮಕವಾಗಿದ್ದಾರೆ.